Advertisement
ಈಗಾಗಲೇ ಮಳೆ ಆರಂಭಗೊಂಡಿರು ವುದರಿಂದ ನೀರಿನ ಹೊರ ಹರಿವಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಒದಗಿಸುವಲ್ಲಿ ಇನ್ನಷ್ಟು ವಿಳಂಬವಾದರೆ ಮುಖ್ಯರಸ್ತೆ ಸಹಿತ ಆಸುಪಾಸಿನ ಮನೆಗಳು, ಜಲಾವೃತಗೊಂಡು ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಗುತ್ತಿಗೆದಾರರು ರಸ್ತೆ ಇಕ್ಕೆಲಗಳಲ್ಲಿ ತುಂಬಿರುವ ಮಣ್ಣನ್ನು ಸಮಾನವಾಗಿ ಸವರಿ ಒಳಚರಂಡಿ ವ್ಯವಸ್ಥೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ ಸಹಿತ ವಿವಿಧ ಗ್ರಾ.ಪಂ. ವ್ಯಾಪ್ತಿ ಗಳಲ್ಲಿನ ಮುಖ್ಯರಸ್ತೆ, ಕೂಡುರಸ್ತೆ ಗಳಲ್ಲಿನ ಒಳಚರಂಡಿ ವ್ಯವಸ್ಥೆ ಮಾಯವಾಗಿರುವುದು ಕಂಡುಬಂದಿದ್ದು ಈ ಮಳೆಗಾಲದೊಳಗೆ ಚರಂಡಿ ವ್ಯವಸ್ಥೆ ಪೂರ್ಣಗೊಳಿಸುವುದರಲ್ಲಿ ಪಂಚಾಯತ್ ಮುತುವರ್ಜಿ ವಹಿಸದಿದ್ದಲ್ಲಿ ಮನೆಗಳು ಜಲಾವೃತಗೊಳ್ಳಲಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.