Advertisement
ಹಿರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಶಿರೂರು ಮಠದ ಗುಂಡಿ ಸೇರಿದಂತೆ ವಿವಿಧ ಕಡೆಯ ಪಂಪ್ ಮಾಡಲು ನಗರಸಭೆಯಿಂದ 45 ದಿನಕ್ಕೆ 33 ಲ.ರೂ. ಟೆಂಡರ್ ಆಗಿತ್ತು. ಕೇವಲ ಮೂರು ಪಂಪ್‌ಗ್ಳ ಮೂಲಕ 15 ದಿನಗಳು ಗುಂಡಿಗಳ ನೀರು ಪಂಪ್ ಮಾಡಲಾಯಿತು. ಕಳೆದ ಕೆಲವು ದಿನಗಳಲ್ಲಿ ಮಳೆಯಾಗುತ್ತಿರುವುದರಿಂದ ಬಜೆಯಲ್ಲಿ ನೀರಿನ ಒಳ ಹರಿವು ಪ್ರಾರಂಭವಾದ ಹಿನ್ನೆಲೆಯಲ್ಲಿ ಮೇ 12ರಿಂದ ಪಂಪಿಂಗ್ ನಿಲ್ಲಿಸಲಾಗಿದೆ. ಈಗ ನಗರಸಭೆ ಟೆಂಡರ್ ಅರ್ಧದಲ್ಲಿ ಸ್ಥಗಿತಗೊಳಿಸಿದ್ದು, ಟೆಂಡರ್‌ದಾರರಿಗೆ 33 ಲ.ರೂ. ಬದಲಾಗಿ 15 ದಿನಗಳ ಕೆಲಸಕ್ಕೆ 10 ಲ.ರೂ. ಪಾವತಿಸಿದೆ.
ಕಳೆದ ಬಾರಿ ಬೇಸಗೆಯಲ್ಲಿ ಬಜೆಟ್‌ನಲ್ಲಿ ಪಂಪಿಂಗ್‌ಗಾಗಿ 45 ಲ.ರೂ. ಹಾಗೂ ನಗರದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸುಮಾರು 50 ಲ.ರೂ. ವ್ಯಯಿಸಲಾಗಿತ್ತು. ನೀರಿನ ಒಳ ಹರಿವು!
ಪರಿಣಾಮವಾಗಿ 6 ದಿನಗಳಿಂದ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂ ನಲ್ಲಿ ನೀರಿನ ಒಳ ಹರಿವು ಪ್ರಾರಂಭವಾಗಿದೆ. ಬಜೆಯಲ್ಲಿ ಮೇ 13ರಂದು 2.8 ಮೀ. ನೀರಿದ್ದು, ಇದೀಗ ಒಳಹರಿವಿನಿಂದ ಮೇ 18ರಂದು ನೀರಿನ ಪ್ರಮಾಣ 5.71 ಮೀ. ಏರಿಕೆಯಾಗಿದೆ.
Related Articles
ಬಜೆಯಲ್ಲಿ ಒಳ ಹರಿವು ಪ್ರಾರಂಭವಾಗಿದೆ. ಇದರಿಂದಾಗಿ ಪಂಪಿಂಗ್ ಕಾರ್ಯ ಸ್ಥಗಿತಗೊಳಿಸಲಾಗಿದೆ. ಬಜೆಯಲ್ಲಿ 4.12 ಮೀ. ನೀರು ಸಂಗ್ರಹವಾಗಿದ್ದು, ಮಳೆ ಬಾರದೆ ಇದ್ದರೂ ಮುಂದಿನ 40 ದಿನಗಳ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಗರದ ಜನತೆಗೆ ಕುಡಿಯುವ ನೀರು ಒದಗಿಸಬಹುದು.
-ಮೋಹನ್ ರಾಜ್, ಸಹಾಯಕ ಎಂಜಿನಿಯರ್, ನಗರಸಭೆ ಉಡುಪಿ.
Advertisement