Advertisement

ಸಂಸ್ಕರಣಾ ಘಟಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

12:31 PM Sep 07, 2020 | Suhan S |

ದೇವನಹಳ್ಳಿ: ಲಾಕ್‌ಡೌನ್‌ನಿಂದಾಗಿ ಕೋಲ್ಡ್‌ ಸ್ಟೋರೇಜ್‌ನ ಬೆಲೆ ಗೊತ್ತಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತರಕಾರಿ ಹಣ್ಣು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದರು.

Advertisement

ತಾಲೂಕಿನ ಪೂಜನಹಳ್ಳಿ ಗಾಂಧಿ ಶತಮಾನದ ತೋಟದಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದಿಂದ ನಿರ್ಮಿಸುತ್ತಿರುವ ಶೀತಲ ಸರಪಳಿ ಹಾಗೂ ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಘಟಕದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

24.60 ಕೋಟಿ ವೆಚ್ಚದಲ್ಲಿ ನಿರ್ಮಾಣ: ಈ ಭಾಗ ದಲ್ಲಿ ಅತೀ ಹೆಚ್ಚು ರೈತರು ಇರುವಜಾಗದಲ್ಲಿಯೇ ಹಣ್ಣು, ತರಕಾರಿ, ಪ್ರತಿನಿತ್ಯ ಬೆಂಗಳೂರು ಇತರೆ ಕಡೆಗಳಿಗೆ ಕಳುಹಿಸಿಕೊಡುತ್ತಿದ್ದಾರೆ. ಈ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಶೀತಲ ಸರಪಳಿ, ಹಣ್ಣು ತರಕಾರಿ ಶೀತಲ ಕೇಂದ್ರವನ್ನು 24.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗು ತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿಯೇ ಇಂತಹ ಘಟಕವಾಗುತ್ತಿರುವುದರಿಂದ ರಫ್ತು ಮಾಡಲು ಅನುಕೂಲವಾಗುತ್ತದೆ. ಅಧಿಕಾರಿಗಳು ಘಟಕದ ಕಾಮಗಾರಿ ಕೆಲಸದ ವೇಗವನ್ನು ಹೆಚ್ಚಿಸಬೇಕು ಎಂದು ಹೇಳಿದರು.

ತಪ್ಪು ಸರಿಪಡಿಸಬಹುದು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ಮಾಡಿಸುವುದಕ್ಕೆ ರೈತರು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ರೈತರಿಂದಲೇ ಬೆಳೆ ಸಮೀಕ್ಷೆಯನ್ನು ಸ್ಮಾರ್ಟ್‌ಫೋನ್‌ನಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಬೆಳೆಗಳ ವಿವರಗಳನ್ನು ಅಪ್‌ಲೋಡ್‌ ಮಾಡಬಹುದು. ಈ ಭಾಗದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವುದರಿಂದ ರಾಗಿ ಖರೀದಿ ಸಂದರ್ಭದಲ್ಲಿಪಹಣಿಗ ಳಲ್ಲಿ ಒಂದೊಂದು ರೀತಿ ತಪ್ಪು ಇರುತ್ತದೆ ಎಂದು ರೈತರು ತಮ್ಮ ಗಮನಕ್ಕೆ ತಂದಿದ್ದರು. ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ರೈತರು ಮಾಡಿಕೊಂಡಾಗ ಈ ರೀತಿ ಯ ತಪ್ಪುಗಳನ್ನು ಸರಿದೂಗಿಸಬಹುದು ಎಂದರು.

ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಹಾಂತೇಶ್‌ ಮುರು ಗೋಡ್‌, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಉಪನಿರ್ದೇಶಕಿ ವಿನುತಾ, ತಾಲೂಕು ಸಹಾಯಕ ನಿರ್ದೇಶಕಿ ವೀಣಾ ಇದ್ದರು.

Advertisement

ರಫ್ತು ಮಾಡಲು ಅನುಕೂಲ :  ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫು¤ ನಿಗಮದ ವ್ಯವಸ್ಥಾಪಕ ಬಿ.ಶಿವರಾಜ್‌ ಮಾತನಾಡಿ, 24.60 ಕೋಟಿ ರೂ. ವೆಚ್ಚದಲ್ಲಿ ಶೀತಲ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದಲ್ಲಿಯೇ ಇರುವುದರಿಂದ ದೇಶ ವಿದೇಶಗಳಿಗೆ ಹಣ್ಣು-ತರಕಾರಿ ರಫು¤ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಶೀತಲ ಸರಪಳಿ ಘಟಕ, ಶೀತಲ ಗೃಹ, ಪ್ಯಾಕ್‌ಹೌಸ್‌, ಹಣ್ಣು ಮಾಗಿಸುವ ಘಟಕ, ಬಿಸಿ ನೀರಿನಲ್ಲಿ ಶಾಖೋಪಕರಣ ಘಟಕ, ಪ್ರಯೋಗಾಲಯ ಮುಂತಾದವು ಗಳನ್ನು ಸ್ಥಾಪಿಸಲಿದೆ. ಈ ಎಲ್ಲಾ ಘಟಕಗಳಲ್ಲಿ ಒಣದ್ರಾಕ್ಷಿ, ದಾಳಿಂಬೆ, ನಿಂಬೆ ಸೇರಿದಂತೆ ವಿವಿಧ ರೀತಿಯ ಬೇಳೆ ಕಾಳುಗಳನ್ನು ಸಂಗ್ರಹಿಸಲಾಗುವುದು. ದೇಶ-ವಿದೇಶಗಳಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆ ಹೊಂದಿದೆ. ಆದ್ದರಿಂದ ತೋಟಗಾರಿಕಾ ಉತ್ಪನ್ನಗಳ ರಫ್ತಿಗೆ ಹಾಗೂ ಸ್ಥಳೀಯ ಮಾರುಕಟ್ಟೆಗೆ ಅನುಕೂಲವಾಗುವಂತೆ ಹೆಚ್ಚು ದಿನ ಉತ್ಪನ್ನಗಳನ್ನು ಹಾಳಾಗದಂತೆ ಸಂಗ್ರಹಿಸಿಡಲು, ಸಮಗ್ರ ಶೀತಲ ಘಟಕವು ರೈತ ಸಮುದಾಯಕ್ಕೆ ಉಪಯೋಗವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next