Advertisement
ಸಮ್ಮೇಳನ ಪ್ರಧಾನ ವೇದಿಕೆಗೆ ಖಾಸ್ಗತ ಶಿವಯೋಗಿಗಳ ಹೆಸರಿಡಲಾಗಿದೆ. ಮಹಾ ಮಂಟಪಕ್ಕೆ ದಿ| ವೀರಸಂಗಪ್ಪ ಹಗರಟಗಿ ಅವರ ಹೆಸರನ್ನು, ದ್ವಾರ 1ಕ್ಕೆ ಕೊಂಡಗೂಳಿ ಕೇಶಿರಾಜ, ದ್ವಾರ 2ಕ್ಕೆ ಬಂಥನಾಳ ಶಿವಯೋಗಿಗಳ, ಪುಸ್ತಕ ಮಳಿಗೆಗಳಿಗೆ ದಿ| ಎಂ.ಎಂ. ಕಲ್ಬುರ್ಗಿ, ಚಿತ್ರಕಲಾ ಪ್ರದರ್ಶನಕ್ಕೆ ದಿ| ಹಾಸಿಂಪೀರ್ ಚನ್ನೂರ ಹೆಸರು ಇಡಲಾಗಿದೆ.
Related Articles
Advertisement
ಕನ್ನಢಾಭಿಮಾನಿಗಳ ಅತಿಥಿಗಳ ಊಟದ ವ್ಯವಸ್ಥೆಗೆ ಸಂಗಮಾರ್ಯ ವಿದ್ಯಾ ಸಂಸ್ಥೆಯ ಎರಡು ಬೃಹತ್ ಸಭಾಭವನಗಳನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಅತಿಥಿ ಮಹೋದಯರಿಗೆ ವಿಶ್ರಾಂತಿಗೆ ಪಟ್ಟಣದ ವಿವಿಧ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಪಟ್ಟಣದಲ್ಲಿ ಎರಡು ದಿನ ನಡೆಯಲಿರುವ ಸಮ್ಮೇಳನವನ್ನು ರಾಜ್ಯ ಸಮ್ಮೇಳನ ಮಾದರಿಯಲ್ಲಿ ಜರುಗಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಪಟ್ಟಣ ಅಲಂಕೃತಗೊಂಡಿದ್ದ ಸಾಹಿತ್ಯಾಭಿಮಾನಿಗಳಿಗೆ, ಕನ್ನಢಾಭಿಮಾನಿಗಳಿಗೆ ಕೈ ಬೀಸಿ ಕರೆಯುತ್ತಿದೆ.
ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆತಾಳಿಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ವಿಜಯಪುರ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ. 28 ಹಾಗೂ 29ರಂದು ತಾಳಿಕೋಟೆ ಪಟ್ಟಣದಲ್ಲಿ ನಡೆಯಲಿದೆ. ಎಸ್.ಎಸ್. ವಿದ್ಯಾ ಸಂಸ್ಥೆ ಆವರಣದಲ್ಲಿ 28ರಂದು ಬೆಳಗ್ಗೆ 8ಕ್ಕೆ ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪರಿಷತ್, ಕಸಾಪ ತಾಲೂಕಾಧ್ಯಕ್ಷೆ ಸುಮಂಗಲಾ ಕೊಳೂರ ನಾಡ ಧ್ವಜಾರೋಹಣ ನೆರವೇರಿಸುವರು. 8:30ಕ್ಕೆ ಸಮ್ಮೇಳನಾಧ್ಯಕ್ಷ ಬಿ.ಆರ್. ಪೊಲೀಸ್‌ಪಾಟೀಲ ಅವರ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು ಪ್ರಮುಖ ಬೀದಿಗಳ ಮೂಲಕ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಿಂದ ಸಮ್ಮೇಳನದ ಮುಖ್ಯ ವೇದಿಕೆಗೆ ಕರೆ ತರಲಾಗುವುದು. ಬೆಳಗ್ಗೆ 11ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ. ಮಧ್ಯಾಹ್ನ 2ಕ್ಕೆ ”ನಾಡು ನುಡಿ” ಗೋಷ್ಠಿ 1 ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ವಹಿಸುವರು. 3:30ಕ್ಕೆ ಕೃಷಿ ಸಂಪದ ಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಡಾ| ಅಶೋಕರಾಜ ಪಾಟೀಲ ವಹಿಸುವರು. ಸಾಯಂಕಾಲ 5ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಜರುಗಲಿದ್ದು ಪ್ರಧಾನ ನಿರ್ವಹಣೆಯನ್ನು ಮಲ್ಲಿಕಾರ್ಜುನ ಮೇತ್ರಿ, ಡಾ| ಎಸ್.ಕೆ. ಕೊಪ್ಪ, ದ್ರಾಕ್ಷಾಯಿಣಿ ಬಿರಾದಾರ, ಗೀತಯೋಗಿ ಪಾಲ್ಗೊಳ್ಳುವರು. ಸಂಜೆ 6ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವವು.