Advertisement

Floating solar; ಸಣ್ಣ ನೀರಾವರಿ ಕೆರೆಗಳ ಮೇಲೆ ಸೌರಫ‌ಲಕ: ಭೋಸರಾಜು

11:02 PM Aug 28, 2024 | Team Udayavani |

ಬೆಂಗಳೂರು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ತೇಲುವ ಸೌರಫ‌ಲಕ (ಫ್ಲೋಟಿಂಗ್‌ ಸೋಲಾರ್‌ ಪ್ಯಾನೆಲ್‌) ಅಳವಡಿಸಿ 2,500 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌. ಭೋಸರಾಜು ಸೂಚನೆ ನೀಡಿದರು.

Advertisement

ಕೆರೆ ನೀರಿನ ಮೇಲೆ ಸೌರಫ‌ಲಕ ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡಲು ಅನುಕೂಲ ಆಗಬಲ್ಲ ಸಂಸ್ಥೆಗಳ ಜತೆಗೆ ಸಭೆ ಆಯೋಜಿಸುವಂತೆ ಕೆಆರ್‌ಇಡಿಎಲ್‌ ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ಬಿಎಚ್‌ಇಎಲ್‌, ಸೆನ್‌ಗ್ರೋ, ಆರುಷಿ ಗ್ರೀನ್‌ ಎನರ್ಜಿ, ಸಿಲ್‌ ಆ್ಯಂಡ್‌ ಟ್ರೆರೆ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಮಂಗಳವಾರ ವಿಕಾಸಸೌಧದಲ್ಲಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

40 ಕೆರೆ ಗಳ ಗುರುತು
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ 100 ಎಕರೆಗೂ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ 40 ಕೆರೆಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next