Advertisement

ಪಾಸಾಗುವುದಷ್ಟೇ ಮುಖ್ಯ ಎಂದು ಮೂಗು ಮುರಿಯಬೇಡಿ !

01:01 AM May 14, 2024 | Team Udayavani |

ಮಂಗಳೂರು: ನಿಜ, ಕೆಲವರಿಗೆ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದರೆ ಸಾಧನೆ, ಇನ್ನು ಕೆಲವರಿಗೆ ತೇರ್ಗಡೆಯಾದರೆ ಅದೇ ಸಾಧನೆ. ನಿಜದ ಅರ್ಥದಲ್ಲಿ ಎರಡೂ ಸಂಭ್ರಮವೇ, ಆದ್ಯತೆಯೆ ಬೇರೆ. ಕುಡುಪಿನ ಮಂಗಳಾನಗರದಲ್ಲಿ ಇಂಥದ್ದೇ ಒಂದು ಅಪರೂಪದ ಸಂಭ್ರಮಾಚರಣೆ ನಡೆದಿದೆ. ಇತ್ತೀಚಿನ ಎಸ್‌ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೇ (ಜಸ್ಟ್‌ ಪಾಸ್‌) ವಿದ್ಯಾರ್ಥಿಯೋರ್ವನಿಗೆ ಯುವ ಫ್ರೆಂಡ್ಸ್‌ನ ಗೆಳೆಯರು ಹಿತೈಷಿಗಳು ಸೇರಿ ಬ್ಯಾನರ್‌ ಹಾಕಿ ಅಭಿನಂದಿಸಿದ್ದಾರೆ.

Advertisement

ಬ್ಯಾನರ್‌ ಹೀಗಿದೆ ನೋಡಿ : ವಿದ್ಯಾರ್ಥಿಯ ಫೋಟೋ ಇರುವ ಬ್ಯಾನರ್‌ನಲ್ಲಿ ಆತನಿಗೆ ಅಭಿನಂದನೆಗಳನ್ನು ಸಲ್ಲಿಸಿ ಪಕ್ಕದಲ್ಲೇ ಸಂಭ್ರಮಿಸುವ ಇಮೋಜಿ ಹಾಕಲಾಗಿದೆ. “ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್‌ ಮಹಾತೆ¾ಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್‌, ಕ್ರಾಕ್ಸ್‌, ಪಿಯುಸಿ, ಫೀಸ್‌ ಆಮಿಷದಿಂದ, ಬ್ರೂಸ್ಲಿ ಪಾಸೋ ಫೇಲೋ ಎಂಬುದಕ್ಕೆ ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೈಲ್‌ ಆಗುವವನು ಹರಕೆ ಬಲದಿಂದ, ಪ್ರಯತ್ನದ ಫಲದಿಂದ-ಹೇಗೂ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್‌ ಪಾಸಾಗಿರೋದೇ ನಮಗೆಲ್ಲ ಸಂಭ್ರಮ’.

ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್‌ ನಿಮಗೆ ಅಭಿನಂದನೆಗಳು ಎಂದು ಅಭಿನಂದಿಸಲಾಗಿದೆ. ಈ ಬ್ಯಾನರ್‌ ವಿದ್ಯಾರ್ಥಿಯ ಸಂಭ್ರಮವನ್ನಷ್ಟೇ ಇಮ್ಮಡಿಗೊಳಿಸಿಲ್ಲ; ಜತೆಗೆ ಬ್ಯಾನರ್‌ ಕೂಡ ವೈರಲ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.