Advertisement

ಹಾನಿಗೆ ಪರಿಹಾರ ; ಮಳೆ ಹಾನಿ ಪ್ರದೇಶ ವೀಕ್ಷಣೆ ಸಿಎಂ ಬೊಮ್ಮಾಯಿ ಆದೇಶ

11:21 AM Nov 22, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿ ಪರಿಹಾರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕೃಷಿ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಸಿಬಂದಿ ಮುಂದಿನ 15-20 ದಿನಗಳ ಕಾಲ ಸಂಪೂರ್ಣವಾಗಿ ಬೆಳೆ ಸಮೀಕ್ಷೆ ಕೆಲಸ ದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

Advertisement

ಗೃಹ ಕಚೇರಿ “ಕೃಷ್ಣಾ’ ದಲ್ಲಿ ರವಿವಾರ ಹಣಕಾಸು, ಗೃಹ, ಗ್ರಾಮೀಣಾಭಿವೃದ್ಧಿ, ಕೃಷಿ, ಸಣ್ಣ ನೀರಾವರಿ, ವಸತಿ ಇಲಾಖೆಗಳ ಅಧಿಕಾರಿ ಗಳ ಜತೆಗೆ ನಡೆದ ಸಭೆಯಲ್ಲಿ ಮಳೆ ಯಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದ ವೇಳೆ ಸಿಎಂ ಈ ಸೂಚನೆ ನೀಡಿದ್ದಾರೆ.

ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಧಿ ಕಾರಿಗಳ ಬಳಿ 689 ಕೋಟಿ ರೂ. ಹೆಚ್ಚುವರಿ ಮೊತ್ತ ಲಭ್ಯವಿದೆ. ಆಗಸ್ಟ್‌, ಸೆಪ್ಟಂಬರ್‌ನಲ್ಲಿ ರಾಜ್ಯದಲ್ಲಿ 3.43 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಅದಕ್ಕೆ ಪರಿಹಾರದ ರೂಪದಲ್ಲಿ 1.5 ಲಕ್ಷ ರೈತರಿಗೆ 130 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ 79 ಸಾವಿರ ರೈತರಿಗೆ ಪರಿಹಾರ ನೀಡಲು 52 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವುದಕ್ಕೆ ಸಿಎಂ ಆದೇಶ ನೀಡಿದ್ದಾರೆ. ಹೆಚ್ಚುವರಿ ಮೊತ್ತದ ಅಗತ್ಯ ಬಿದ್ದಲ್ಲಿ ಕೂಡಲೇ ಬಿಡು ಗಡೆ ಮಾಡಲಾಗುತ್ತದೆ ಎಂದಿದ್ದಾರೆ. ವಿಮಾ ಕಂಪೆನಿಗಳು ಕೂಡ ಬೆಳೆ ನಷ್ಟಕ್ಕೆ ತ್ವರಿತ ವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡ ಬೇಕು ಎಂದರು.

ಪೂರ್ತಿಯಾಗಿ ಮನೆ ಕಳೆದು ಕೊಂಡವರಿಗೆ ಮೊದಲ ಕಂತಿನಲ್ಲಿ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೇಳಿದ ಸಿಎಂ, ಹಾನಿಯ ವಿವರಗಳನ್ನು ಆ್ಯಪ್‌ ಮೂಲಕ ಫೋಟೋ ಸಹಿತ ಅಪ್‌ಲೋಡ್‌ ಮಾಡಬೇಕು ಎಂದರು.

ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್‌

Advertisement

ಹಾನಿಗೆ ಒಳಗಾಗಿರುವ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ ರಾಜ್‌ ಇಲಾಖೆಗಳಿಗೆ 500 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಹಣಕಾಸು ಇಲಾಖೆಗೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶ ನೀಡಿದ್ದಾರೆ. ಜೀವಕ್ಕೆ ಎರವಾಗುವ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್‌ ಸ್ಥಾಪಿಸಬೇಕು ಹಾಗೂ ಲೈಟಿಂಗ್‌ ವ್ಯವಸ್ಥೆ ಮಾಡಬೇಕು ಎಂದರು. ಜತೆಗೆ ಅವುಗಳನ್ನು ಆದ್ಯತೆಯಲ್ಲಿ ದುರಸ್ತಿ ಮಾಡಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹಾನಿಗೆ ಒಳಗಾಗಿರುವ ವಿವರಗಳನ್ನು ಸಿದ್ಧಪಡಿಸಬೇಕು. ಸಂಪರ್ಕ ಕಡಿತ ಗೊಂಡ ಸ್ಥಳಗಳಲ್ಲಿ ಆದ್ಯತೆಯ ರೀತಿ ಯಲ್ಲಿ ದುರಸ್ತಿ ಮಾಡುವ ಬಗ್ಗೆ ಮುಂದಾಗಬೇಕು ಎಂದರು.

ವೀಕ್ಷಣೆ ನಡೆಸಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವಿವಾರ ಚಿಕ್ಕಬಳ್ಳಾಪುರ ತಾಲೂಕಿನ ಆನೆ ಮೊಡಗು ಗ್ರಾಮಕ್ಕೆ ತೆರಳಿ ಮಳೆ ಹಾನಿ ಪ್ರದೇಶ ಗಳನ್ನು ವೀಕ್ಷಿಸಿದರು. ಸಚಿವರಾದ ಡಾ| ಸುಧಾಕರ್‌, ಆರ್‌. ಅಶೋಕ್‌, ಸಂಸದ ಮುನಿಸ್ವಾಮಿ ಸಾಥ್‌ ನೀಡಿದರು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, 1,078 ಮನೆಗಳು ಭಾಗಶಃ ಕುಸಿದಿವೆ. ಪೂರ್ತಿ ಕುಸಿದು ಬಿದ್ದ ಮನೆ ಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡ ಲಾಗುವುದು ಎಂದು ಸಿಎಂ ಪ್ರಕಟಿಸಿದರು.

ರಾಜ್ಯದಲ್ಲಿ ಚುನಾವಣ ನೀತಿ ಜಾರಿಯಲ್ಲಿ ಇರುವುದರಿಂದ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ನಡೆಸಲು ತೊಡಕಾಗಿದೆ. ಹೀಗಾಗಿ ರಿಯಾ  ಯಿತಿ ನೀಡು ವಂತೆ ಚುನಾವಣ ಆಯೋಗಕ್ಕೆ ಸರಕಾರ ಪತ್ರ ಬರೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾನಿ ಉಂಟಾದ ಜಿಲ್ಲೆ ಗಳಿಗೆ ಭೇಟಿ ನೀಡಿ, ಉತ್ತಮ ಕೆಲಸ ಮಾಡುತ್ತಿದ್ದಾರೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next