ಆಲೂರು: ತಾಲೂಕಿನ ಬೈರಾಪುರ ಗ್ರಾಮದಲ್ಲಿ ಸಮುದಾಯದ ಭವನ ಕಾಮಗಾರಿ ಅರ್ಧಕ್ಕೆ ನಿಂತ ವಿಚಾರ ವಾಗಿ ಉದಯವಾಣಿ ಹಾಸನ ಆವೃತ್ತಿ ಯಲ್ಲಿ ಆ.6 ರಂದು “”ಸಮುದಾಯ ಭವನ ಕಾಮಗಾರಿ ನನೆಗುದಿಗೆ” ಶೀರ್ಷಿಕೆಯಡಿ ವರದಿ ಪ್ರಕಟ ಬಳಿಕ ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡಿದ್ದು, ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸುಮಾರು 18 ವರ್ಷದ ಹಿಂದೆ ಕಾಮಗಾರಿ ಮಾಡಲಾಗಿದ್ದು, ಸಮು ದಾಯ ಭವನದ ತಳಪಾಯ ಹಾಗೂ ಗೋಡೆ ಸಂಪೂರ್ಣ ಶಿಥಿಲಗೊಂಡಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಇದನ್ನು ಸಂಪೂರ್ಣ ತೆರವುಗೊಳಿಸಿ ಹೊಸದಾಗಿ ಸಮುದಾಯ ಭವನ ನಿರ್ಮಾಣ ಮಾಡ ಬೇಕಾಗುತ್ತದೆ. ಹೆಚ್ಚು ಅನುದಾನ ಬೇಕಾಗುವುದರಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೊಣ ಎಂದರು.
ಬಿಜೆಪಿ ಮುಖಂಡ ಬಿ.ಆರ್.ಗುರುದೇವ್ ಅವರು 2004 ರಲ್ಲಿ ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯ ರಾಗಿದ್ದ ಸಂದ ರ್ಭ ದಲ್ಲಿ ಗ್ರಾಮ ಸ್ಥರ ಒತ್ತಾಸೆ ಮೇರೆಗೆ ಅವರ ಅನುದಾ ನದಲ್ಲಿ 5 ಲಕ್ಷ ರೂ. ಮಂ ಜೂರು ಮಾಡಿ ದ್ದರು. ಅದರೆ ಆ ಹಣದಲ್ಲಿ ತಳಪಾಯ ಹಾಗೂ ಗೋಡೆ ಮಾತ್ರ ನಿರ್ಮಾಣ
ಮಾಡ ಲಾಗಿತ್ತು. ಬಳಿಕ ಆಯ್ಕೆಯಾದ ಜನಪ್ರತಿನಿಧಿಗಳು ಅನುದಾನ ನೀಡದ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿತ್ತು. ಈ ವಿಚಾರವಾಗಿ ಪತ್ರಿಎಯಲ್ಲಿ ವರದಿ ಪ್ರಕಟ ಬಳಿಕ ಶಾಸಕ ಸಿಮೆಂಟ್ ಮಂಜು ಬೈರಾಪುರ ಗ್ರಾಮದ ಸಮುದಾಯ ಭವನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಡಿ.ಅಶೋಕ್ ಮಾತನಾಡಿ, ಗ್ರಾಮದಲ್ಲಿ ಸುಮಾರು 500 ನೂರಕ್ಕೂ ಹೆಚ್ಚು ಮನೆಗಳಿದ್ದು, 2,500 ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮಕ್ಕೆ ಸಮುದಾಯ ಭವನದ ಅವಶ್ಯಕತೆ ಇದೆ. ಶಾಸಕರು ಹೆಚ್ಚು ಅನುದಾನ ನೀಡುವುದರ ಮೂಲಕ ಸಮುದಾಯ ಭವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಹೇಮಾ ಮಂಜೇಗೌಡ, ಮಾಜಿ ಅಧ್ಯಕ್ಷ ರುದ್ರೇಗೌಡ, ಗ್ರಾಪಂ ಸದಸ್ಯ ಗಣೇಶ್, ಗ್ರಾಮದ ಹಿರಿಯ ಮುಖಂಡ ಮಂಜೇಗೌಡ ಇದ್ದರು.
-ಟಿ.ಕೆ.ಕುಮಾರಸ್ವಾಮಿ, ಟಿ.ತಿಮ್ಮನಹಳ್ಳಿ