Advertisement

ಭೂಗತರಾಗಿಯೇ ಕಮ್ಯುನಿಷ್ಟರ ಸ್ವಾತಂತ್ರ್ಯಹೋರಾಟ: ಪ್ರಕಾಶ್‌

07:10 AM Aug 12, 2017 | |

ಕುಂದಾಪುರ: ದೇಶದ ಸ್ವಾತಂತ್ರ್ಯಗಳಿಸಲು ಹಿಂದೂಗಳು ಮತ್ತು ಮುಸಲ್ಮಾನರು ಏಕತೆಯಿಂದ ಹೋರಾಡಿದರು. ಬ್ರಿಟಿಷರು ಜನತೆಯ ಐಕ್ಯ ಹೋರಾಟ ತಡೆಯುವ ವ್ಯರ್ಥ ಪ್ರಯತ್ನ ಮಾಡಿದರು. ಸಂಪೂರ್ಣ ಸ್ವಾತಂತ್ರ್ಯದ ಘೋಷಣೆ ಕರೆಕೊಟ್ಟ ಕಮ್ಯೂನಿಷ್ಟ್ ಪಕ್ಷವನ್ನು ಅದೇ ಬ್ರಿಟೀಷರು ನಿಷೇಧಿಸಿದರು.  ಭೂಗತರಾಗಿಯೇ ಕಮ್ಯುನಿಷ್ಟರು ಸ್ವಾತಂತ್ರ್ಯ ಹೋರಾಟ ನಡೆಸಿದರು ಎಂದು ಸಿಪಿಐ(ಎಂ) ರಾಜ್ಯ ಮುಖಂಡ ಕೆ.ಪ್ರಕಾಶ್‌ ಹೇಳಿದರು.

Advertisement

ಅವರು ಹಂಚು ಕಾರ್ಮಿಕ ಭವನದಲ್ಲಿ ಸಿಪಿಐ (ಎಂ) ಪಕ್ಷದ ಆಶ್ರಯದಲ್ಲಿ ನಡೆದ “ಬ್ರಿಟೀಷರೇ ಭಾರತ  ಬಿಟ್ಟು ತೊಲಗಿ’ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದ‌ರ್ಭದಲ್ಲಿ ಬಂಗಾಲದಲ್ಲಿ ಜನಸಂಘದ ಸ್ಥಾಪಕ ಮುಖಂಡ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಹಿಂದೂ ಮಹಾಸಭಾದ ಭಾಗವಾಗಿ ಮುಸ್ಲಿಂ ಲೀಗ್‌ ಜೊತೆ ಮೈತ್ರಿ ಸರಕಾರದಲ್ಲಿ ಅರ್ಥ ಮಂತ್ರಿಯಾಗಿದ್ದರು. ಕ್ವಿಟ್‌ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರಿಗೆ ಸಹಕರಿಸಬೇಕು ಎಂದು ಕರೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌.ಎಸ್‌. ಎಸ್‌.ನ ಪಾತ್ರ ಹಲವಾರು ಸಂದರ್ಭಗಳಲ್ಲಿ ಬ್ರಿಟೀಷರಿಗೆ ವಿಧೇಯಕನಾಗಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ. ಕಮ್ಯುನಿಷ್ಟರು ಅಂಡಮಾನ್‌ ಜೈಲಲ್ಲಿ ಬಂ ಧಿಯಾಗಿ ತೀವ್ರ ಚಿತ್ರಹಿಂಸೆ ಅನುಭವಿಸಿದರೂ ಕೊನೆವರೆಗೂ ದೇಶಕ್ಕಾಗಿ ಹೋರಾಡಿದರು ಎಂದರು. 

ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ್‌ , ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ  ಮಾತನಾಡಿದರು.
ಜಿ. ಎನ್‌. ನಾಗರಾಜ್‌ ಅವರು “ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ’ ಪುಸ್ತಕ ಬಿಡುಗಡೆ ಮಾಡಲಾಯಿತು. ಸುರೇಶ್‌ ಕಲ್ಲಾಗರ ಸ್ವಾಗತಿಸಿ, ಎಚ್‌. ನರಸಿಂಹ ವಂದಿಸಿದರು
 

Advertisement

Udayavani is now on Telegram. Click here to join our channel and stay updated with the latest news.

Next