Advertisement
ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ಕರ್ಫ್ಯೂ ಹೇರಲಾಗಿದ್ದು, ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ 77 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Related Articles
Advertisement
“ನಾವು ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಮರುಪಡೆಯುವಿಕೆ ಕಾಯಿದೆಯನ್ನು ಅಂಗೀಕರಿಸಿದ್ದೇವೆ. ನಾವು ಕಾಯಿದೆಯಡಿಯಲ್ಲಿ ಕ್ಲೈಮ್ ಟ್ರಿಬ್ಯೂನಲ್ ಅನ್ನು ರಚಿಸುತ್ತಿದ್ದೇವೆ ಮತ್ತು ನಷ್ಟವನ್ನು ನಿರ್ಣಯಿಸಿದ ನಂತರ, ಗಲಭೆಕೋರರಿಂದ ಅದನ್ನು ವಸೂಲಿ ಮಾಡಲಾಗುವುದು” ಎಂದು ಚೌಹಾಣ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬರ್ವಾನಿ ಜಿಲ್ಲೆಯ ಸೆಂಧ್ವಾ ಪಟ್ಟಣದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಇದೇ ರೀತಿಯಲ್ಲಿ ಕಲ್ಲು ತೂರಾಟ ವರದಿಯಾಗಿದ್ದು, ಅಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಐವರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ ಪರಿಸ್ಥಿತಿಯನ್ನು ನಂತರ ನಿಯಂತ್ರಣಕ್ಕೆ ತರಲಾಗಿದೆ.
ಗುಜರಾತ್, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲೂ ರಾಮನವಮಿ ಮೆರವಣಿಗೆಗಳ ಸಮಯದಲ್ಲಿ ಹಿಂಸಾಚಾರ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದು, ಗುಜರಾತ್, ಜಾರ್ಖಂಡ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.