ದೇವರು ಎಲ್ಲದಕ್ಕೂ ಲಿಂಕ್ ಮಾಡಿ ಕಳುಹಿಸಿರುತ್ತಾನೆ. ಯಾರಿಗೆ ಯಾರು ಜೋಡಿ ಅಂತ. ದೇವರು ಮಾನವರಿಗೂ, ಪ್ರಾಣಿಗಳಿಗೂ ಪ್ರೀತಿ, ಪ್ರೇಮ, ವಾತ್ಸಲ್ಯ, ವಯಸ್ಸನ್ನು ವರವಾಗಿ ನೀಡಿದ್ದಾನೆ.
ಆದರೆ ಇದಕ್ಕೆ ಮಾನವ ಮಾತ್ರ ತೃಪ್ತಗೊಂಡಿಲ್ಲ ಎಂದೆನಿಸುತ್ತದೆ. ಈ ಬಗ್ಗೆ ಹೇಳುವುದಾದರೆ ನನಗೊಂದು ಕಥೆ ನೆನಪಾಗುತ್ತದೆ. ಈ ಕಥೆಯ ಮೂಲಕ ನಿಮಗೆ ಮಾನವ ಜನ್ಮದ ಅತ್ಯಾಸೆಯ ಬಗ್ಗೆ ತಿಳಿಯಬಹುದು.
ಒಂದು ದಿನ ಕತ್ತೆಯೂ ದೇವರಲ್ಲಿ ಬಂದು ದೇವರೆ, ಮಾನವನೂ ಇಡೀ ತನ್ನ ಕಷ್ಟವನ್ನು ನನ್ನ ಹೆಗಲಿಗೆ ಏರಿಸಿದ್ದಾನೆ. ನನ್ನ 40 ವರ್ಷದ ಜೀವನವನ್ನು 20 ವರ್ಷಕ್ಕೆ ಮಾಡುವಂತೆ ವರ ನೀಡು ಎಂದಿತು ಇದ್ದಕ್ಕೆ ದೇವರು ತಥಾಸ್ತು ಎಂದನು. ಆಗ ಅಲ್ಲೇ ಇದ್ದ ಮಾನವ ದೇವರೇ ನನಗಿರುವ 40 ವರ್ಷ ಆಯುಷ್ಯ ಸಾಕುವುದಿಲ್ಲ ಇನ್ನು ಹೆಚ್ಚಿಸು ಎಂದಾಗ ದೇವರು ಕತ್ತೆಯ 20 ವರ್ಷವನ್ನು ಮನುಷ್ಯನಿಗೆ ನೀಡಿ ವರ ದಯಪಾಲಿಸಿದನು.
ಅಂತೆಯೇ ಇನ್ನೊಂದು ದಿನ ನಾಯಿ ಕತ್ತೆಯ ಥರಾನೇ ಮನುಷ್ಯ ನನ್ನನ್ನು ಮನೆಯ ಹತ್ತಿರವೇ ಬಂಧಿ ಮಾಡುತ್ತಾನೆ. ನನ್ನಿಂದ ಸೇವೆ ಪಡೆದು ನನಗೆ ಏನು ಕೊಡುವುದಿಲ್ಲ ಎಂಬ ದೂರು ನೀಡಿ ಆಯುಷ್ಯ ಕಡಿಮೆ ಮಾಡಲು ತಿಳಿಸಿತು. ಅಂತೆಯೇ ದೇವರು ಕೂಡ ನಾಯಿಯ 20 ವರ್ಷ ಆಯುಷ್ಯ ಕಡಿಮೆ ಮಾಡಿ, ಅದನ್ನು ಮಾನವ ಕೇಳಿದ್ದಕ್ಕೆ ಅವನಿಗೆ ನೀಡಿದ. ಆಗ ಮನುಷ್ಯನ ಆಯುಷ್ಯ 80 ಆಯಿತು. ಮುಂದೆ ಗೂಬೆಯೂ ದಿನವೀಡಿ ರಾತ್ರಿ ನಾನು ಎಚ್ಚರಗೊಂಡಿರಬೇಕು ಎಂದು ದೂರು ನೀಡಿ ಆಯುಷ್ಯ ಕಡಿಮೆ ಮಾಡಲು ತಿಳಿಸಿತು. 20 ವರ್ಷ ಆಯುಷ್ಯ ಕಡಿಮೆ ಮಾಡಿ ಮನುಷ್ಯನಿಗೆ ನೀಡಲಾಯಿತು. ಆಗ ಮನುಷ್ಯ ತನ್ನ ಆಯುಷ್ಯವನ್ನು 100 ವರ್ಷಕ್ಕೆ ಏರಿಸಿಕೊಂಡನು. ಹೀಗೆ ಮನುಷ್ಯನು ತನ್ನ ಆಯುಷ್ಯನು ಹೆಚ್ಚಿಸಿಕೊಂಡನು.
ಈ ಕುರಿತಂತೆ ನಮ್ಮ ಅಜ್ಜನೂ ಕೂಡ ಅಷ್ಟೇ ಸ್ವಾರಸ್ಯವಾಗಿ ಕಥೆಗಳು ಹೇಳುತ್ತಿದ್ದನು. ಅದಕ್ಕೆ ನಲವತ್ತು ವಯಸ್ಸು ಆದ ಮೇಲೆ ನಮ್ಮ ವಯಸ್ಸನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಲಾಗುತ್ತದೆ. ಅಲ್ಲದೇ ಮನುಷ್ಯನ ಆಸೆ ಎಷ್ಟು ಎಂಬುವುದು ಇದರಿಂದ ತಿಳಿಯುತ್ತದೆ. ಮಾನವನಿಗೆ ಆಸೆ ಜಾಸ್ತಿ. ಎಲ್ಲವನ್ನೂ ಬೇರೆಯವರಿಂದ ಪಡೆದುಕೊಳ್ಳುತ್ತಾನೆ, ಆತ ಕೊಡುವುದು ವಿರಳ. ಯಾವತ್ತೂ ಮನುಷ್ಯ ಕೊಡುವುದನ್ನು ಕಲಿಯುತ್ತಾನೋ ಆತನಿಗೆ ಆತ್ಮ ತೃಪ್ತಿ, ಸಮಾಧಾನದ ಜೀವನ ಅಂದೇ ದೊರೆಯುತ್ತದೆ ಎಂಬುವುದು ಈ ಕಥೆಯ ಮೂಲಕ ಅಜ್ಜ ನನ್ನನ್ನು ಎಚ್ಚರಿಸಿದನು.
ಅವಿನಾಶ ಮಂತ್ತಟ್ಟಿ, ಎಂಎಸ್‌ಐ ಇರಾನಿ ಕಾಲೇಜು, ಕಲಬುರ್ಗಿ