Advertisement
ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು. ದೇಶದ ಯಾವುದೇ ರಾಜ್ಯಗಳಲ್ಲಿ ನಾಡಧ್ವಜಕ್ಕೆ ಸಾಂವಿಧಾನಿಕ ಸ್ಥಾನಮಾನವಿಲ್ಲ ಎಂಬುದು ಗೊತ್ತಿದ್ದರೂ ಸರ್ಕಾರ ವಿನಾ ಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ತನ್ನ ಕೆಟ್ಟ ಆಡಳಿತವನ್ನು ಮುಚ್ಚಿಕೊಳ್ಳಲು ಹೊರಟಿದೆ ಎಂದು ದೂರಿದರು. ಈಗಾಗಲೇ ರಾಜ್ಯದಲ್ಲಿ ಕನ್ನಡಕ್ಕೊಂದು ಧ್ವಜವಿದೆ. ರಾಷ್ಟ್ರಧ್ವಜಕ್ಕೆ ನೀಡಿದ ಗೌರವವನ್ನೇ ಈ ಧ್ವಜಕ್ಕೂ ನೀಡುತ್ತಿದ್ದೇವೆ. ರಾಜ್ಯೋತ್ಸವದ ದಿನ ನಾಡಧ್ವಜವನ್ನೂ ಹಾರಿಸುತ್ತೇವೆ. ಹೀಗಿರುವಾಗ ಸರ್ಕಾರದ ಹುಳುಕುಗಳನ್ನು ಮುಚ್ಚಿಹಾಕಲು ನಾಡಧ್ವಜ ವಿಚಾರವನ್ನು ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿಯವರು ಕನ್ನಡ ವಿರೋಧಿಗಳು ಎನ್ನುವಂತೆ ನೋಡುತ್ತಾರೆ.
Advertisement
ಸಮಿತಿ ರಚಿಸುವ ಗಿಮಿಕ್: ಬಿಎಸ್‌ವೈ
05:15 AM Jul 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.