Advertisement
ಪ್ರಥಮ ಸ್ಥಾನವನ್ನು ತಮಿಳು ನಾಡಿನ ಎ. ವೆಂಕಟ್ ಪಡೆದಿದ್ದು, 2 ಮತ್ತು 3ನೇ ಸ್ಥಾನವನ್ನು ಬೆಂಗಳೂರಿನ ವಿಶಾಲ್ ಬೈಸಾನಿ ಹಾಗೂ ಅಪ್ಪೋರ್ವ್ ತಂಡನ್ ಪಡೆದಿದ್ದಾರೆ. ಅಲ್ಲದೆ, ಮೊದಲ 100 ರ್‍ಯಾಂಕ್‌ನಲ್ಲಿ 52 ಸ್ಥಾನ ಕರ್ನಾಟಕದ ಪಾಲಾಗಿದೆ.
Related Articles
ಜೂ. 19ರಂದು ದೇಶಾದ್ಯಂತ 154 ನಗರದ 230 ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಸಲಾಗಿತ್ತು. 61,635 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕರ್ನಾಟಕದ 21,108 ಹಾಗೂ 36,278 ಕರ್ನಾಟಕೇತರ ಅಭ್ಯರ್ಥಿಗಳು ಸೇರಿ 57,387 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಜೂ.22ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿತ್ತು.
Advertisement
159 ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಗಳನ್ನು ಪರಿಣಿಸಿದ್ದ ಸಮಿತಿಯು ಜೂ. 30ರಂದು ಅಂತಿಮ ಉತ್ತರಗಳನ್ನು ಪ್ರಕಟಿಸಿತ್ತು. ಇದೀಗ ಫಲಿತಾಂಶ ಪ್ರಕಟಿಸಿದೆ.
ಶೀಘ್ರವೇ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಸದ್ಯದಲ್ಲಿಯೇ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಅನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ರ್‍ಯಾಂಕ್ ಪಡೆದಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ಬಳಸಿ ಮೂಲ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ತಿಳಿಸಿದೆ. ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ತಿಳಿಸಿದೆ. ಸಿಇಟಿ ಮೂಲಕವೇ ಭರ್ತಿ
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್-ಕೆ ಪರೀಕ್ಷೆಯು ಕೊನೆಯ ವರ್ಷದ ಪರೀಕ್ಷೆಯಾಗಿದೆ. ಮುಂದಿನ ವರ್ಷದಿಂದ ಸಿಇಟಿ ಮೂಲಕವೇ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಮೊದಲ 10 ಸ್ಥಾನ ಪಡೆದ ಅಭ್ಯರ್ಥಿಗಳು
ಎ. ವೆಂಕಟ್- ತಮಿಳುನಾಡು, ವಿಶಾಲ್ ಬೈಸಾನಿ- ಬೆಂಗಳೂರು, ಅಪ್ಪೋರ್ವ್ ತಂಡನ್- ಬೆಂಗಳೂರು, ಕನಿಷ್R ಶರ್ಮ- ಉತ್ತರ ಪ್ರದೇಶ, ಸಿದ್ಧಾರ್ಥ ಸಿಂಗ್- ಬೆಂಗಳೂರು, ಬೊಯಾಹರೇನ್ ಸಾತ್ವಿಕ್- ಬೆಂಗಳೂರು, ಆರವ್ ಗಿರಿ- ಬೆಂಗಳೂರು, ಸ್ನೇಹ ಪರೀಕ್- ಗುವಾಹಟಿ, ವಿಶಾಖ ಅಗರ್ವಾಲ್- ಜೈಪುರ, ಶ್ರೀಜನ್ ರಂಜನ್- ಜಾರ್ಖಾಂಡ್.