Advertisement

ಅವಕಾಶ ಬಳಸಿಕೊಂಡು ಮೇಲೆ ಬನ್ನಿ: ಪ್ರದೀಪ್‌ಕುಮಾರ್‌

01:17 PM Apr 15, 2022 | Team Udayavani |

ನೆಲಮಂಗಲ: ದೇಶದಲ್ಲಿ ಸಮಾನತೆಯ ಶ್ರೇಷ್ಠತೆಯನ್ನು ಸಾರಿದ ಮಹಾನಾಯಕನನ್ನು ನಾವೆಲ್ಲರೂ ಮರೆಯುವಂತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ಕುಮಾರ್‌ ಅಭಿಪ್ರಾಯಪಟ್ಟರು.

Advertisement

ನಗರದ ಗುರುಭವನದ ಸಭಾಂಗಣ ದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಬಿ.ಆರ್‌ ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿ, ದೇಶದಲ್ಲಿ ಅಸಮಾನತೆಯ ಸಂಕಷ್ಟದಿಂದ ಅನೇಕ ಸಮಸ್ಯೆ ಸೃಷ್ಟಿಯಾಗಿದ್ದವು. ಆದರೆ, ಮಹಾನಾಯಕ ಡಾ. ಅಂಬೇಡ್ಕರ್‌ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾರೆ. ಈಗಲೂ ಸಮಸ್ಯೆಗಳ ಜತೆಪಯಣ ಮಾಡುವುದನ್ನು ಬಿಟ್ಟು ಸಿಕ್ಕ ಅವಕಾಶವನ್ನು ಬಳಸಿಕೊಂಡು ಮೇಲೆ ಬರಬೇಕಾಗಿದೆ ಎಂದರು.

ಗುರುಭವನದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಡಾ.ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸಾಧನೆ ನೆನಪು ಮಾಡಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ರಮೇಶ್‌, ಕಸಾಪ ಗೌರವ ಕಾರ್ಯದರ್ಶಿ ಬೈರನಹಳ್ಳಿ ಪ್ರಕಾಶ್‌, ಸಾಹಿತಿ .ಶಿವಲಿಂಗಯ್ಯ,ಕೇಶವಮೂರ್ತಿ, ಪ್ರತಿನಿಧಿ ವಿಜಯ್‌ ಹೊಸಪಾಳ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next