ಮಲೆನಾಡಿನಲ್ಲಿ ಕಬ್ಬನ್ನು ಅರೆದು ಹಾಲು ತಯಾರಿಸಿ, ಬೆಲ್ಲವಾಗಿಸುವ ಪ್ರಕ್ರಿಯೆ ಆಲೆಮನೆಯಲ್ಲಿ ನಡೆಯುತ್ತದೆ. ಈ ಆಲೆಮನೆ ಎಂದರೆ ಎಲ್ಲರಿಗೂ ತಟ್ಟನೆ ನೆನಪಾಗುವುದು ತೊಡದೇವು. ಕಟ್ಟಿಗೆಯ ಒಲೆಯ ಮೇಲೆ ಮಣ್ಣಿನ ಮಡಿಕೆಯನ್ನು ಬೋರಲಾಗಿ ಮಲಗಿಸಿ, ಅದರ ಮೇಲೆ ತೆಳುವಾದ ಬಟ್ಟೆಯಲ್ಲಿ ತೊಡದೇವಿನ ಹಿಟ್ಟು ತಯಾರಿಸಿ ಬಳಿದು ನಂತರ ಗರಿಗರಿಯಾಗಿ ತೆಗೆಯುವ ಕಜಾjಯವೇ ತೊಡದೇವು.
ಈ ತೊಡದೇವು ನೆನಪಾದಾಗಲೆಲ್ಲ ಅದರ ಜೊತೆ ಮಹಿಳೆಯರ ಶ್ರಮ, ಬೆವರು, ಹೊಗೆಯಿಂದ ಬರುವ ಕಣ್ಣೀರು ಕೂಡ ನೆನಪಾಗುತ್ತದೆ. ಆಲೆಮನೆ ವೇಳೆ ಕೃಷಿಕರು ಮನೆಯ ಹೊರಗೆ ದುಡಿದರೆ, ಕೃಷಿಕ ಮಹಿಳೆಯರು ಮನೆಯೊಳಗೆ ಇಂಥ ತ್ರಾಸ ಪಡುವ ದೃಶ್ಯಗಳು ಮೊದಲಿನಿಂದಲೂ ಕಾಣುತ್ತದೆ. ಇದೇ ಕಾರಣಕ್ಕೆ ಎಷ್ಟೋ ಕುಟುಂಬಗಳು ತೊಡದೇವು ಸಿದ್ಧಗೊಳಿಸೋದನ್ನೇ ಮರೆತಿವೆ.
ಸ್ವತಃ ಕೃಷಿಕರೂ ಆಗಿ ಕಳೆದ ಎರಡೂವರೆ ದಶಕಗಳಿಂದ ವಿವಿಧ ಮಾದರಿಯ ಅಸ್ತ್ರ ಒಲೆಗಳನ್ನು ನಿರ್ಮಾಣ ಮಾಡುತ್ತಿರುವ ಶಿರಸಿಯ ಅರುಣಕುಮಾರ ಜೋಶಿ, ಹೊಸ ಮಾದರಿಯ ತೊಡದೇವು ಒಲೆ ಸಿದ್ಧಗೊಳಿಸಿದ್ದಾರೆ. ಬೇಕೆಂದಲ್ಲಿ ಒಯ್ಯುಬಹುದಾದ, ಬಹು ಬಳಕೆಯ ಹಾಗೂ ಕಡಿಮೆ ಕಟ್ಟಿಗೆ ಬಳಸುವ ಈ ಒಲೆಗೆ ತೊಡದೇವು ಒಲೆ ಎಂದೂ ನಾಮಕಾರಣ ಮಾಡಿದ್ದಾರೆ. ಡಾ. ಶಿವರಾಮ ಕಾರಂತರು ತೊಡದೇವಿಗೆ ಕರೆದದ್ದು ಕಣ್ಣೀರು ಕಜಾjಯ ಅಂತ. ಆದರೆ, ಜೋಶಿ ಕಣ್ಣೀರು ಬರಿಸದಂಥ ಹೊಸ ಬಗೆಯ ಒಲೆಯನ್ನು ಸಿದ್ಧಗೊಳಿಸಿದ್ದಾರೆ. ಹೆಂಗಸರು ಮೊದಲಿನಂತೆ ಬಗ್ಗಿ ಕೆಲಸ ಮಾಡಬೇಕಿಲ್ಲ. ಬದಲಿಗೆ ಕುಳಿತೇ ಕೆಲಸ ಮಾಡಬಹುದಾದ ಒಲೆ ಇದಾಗಿದೆ. ಈ ಒಲೆಯನ್ನು ಬಳಸಿದಾಗ ಶಾಖ, ಹೊಗೆ ಯಾವುದೂ ಬರುವುದಿಲ್ಲ. ಕಟ್ಟಿಗೆ ಉರಿಯುವಾಗ ಶಾಖವೂ ವ್ಯರ್ಥವಾಗುವುದಿಲ್ಲ.
ಸುಮಾರು 50 ಕೆ.ಜಿ ತೂಗುವ ಈ ಒಲೆ, 18 ಇಂಚು ಉದ್ದ, ಅಷ್ಟೇ ಅಗಲ ಹಾಗೂ 12 ಇಂಚು ಎತ್ತರದ್ದಾಗಿದೆ. ಸುತ್ತಲೂ ಕಬ್ಬಿಣ ಇದ್ದು, ಒಳಗೆ ಇಟ್ಟಂಗೆ ಬಳಸಿದ್ದಾರೆ ಬೇಕಾದರೆ ನಾಲ್ಕಡಿ ಎತ್ತರದ ಪೈಪ್ ತೆಗೆದೂ ಒಯ್ಯಬಹುದು.
ಈ ಒಲೆಯನ್ನು ತೊಡದೇವು ತಯಾರಿಸಲೆಂದೇ ಸಿದ್ಧಪಡಿಸಲಾಗಿರುವುದು ನಿಜವಾದರೂ, ಇದನ್ನು ಬಳಸಿ ಮಾಡಬಹುದು.
ಬಳಸಿದ ಮಹಿಳೆಯರು ಹತ್ತು ಕೆ.ಜಿ ಕಟ್ಟಿಗೆ ಬೇಕಿದ್ದರೆ 3 ಕೆ.ಜಿ ಸಾಕು, ತಾಸಿಗೆ ಆಗುವ ಕಾರ್ಯ ಅರ್ಧಗಂಟೆಗೆ ಆಗುತ್ತದೆ ಎನ್ನುತ್ತಾರೆ. ವಿವರಗಳಿಗೆ ಅರುಣಕುಮಾರ ಜೋಶಿ, ಅಂಬಾಗಿರಿ ಶಿರಸಿ, 7349210337.
ರಾಘವೇಂದ್ರ ಬೆಟ್ಟಕೊಪ್ಪ