Advertisement

ವರ್ಣಗಳಿಂದ ಭಾವನೆ ಪ್ರತಿಬಿಂಬಿಸುವ ಕಲೆ

12:04 PM Feb 21, 2017 | |

ಬೆಂಗಳೂರು: “ವರ್ಣಗಳ ಮೂಲಕ ಭಾವನೆಗಳನ್ನು ಪ್ರತಿಬಿಂಬಿಸುವುದೇ ಚಿತ್ರಕಲೆ. ಕಲಾಕೃತಿಗಳನ್ನು ರಚಿಸುವುದು ಕಲಾವಿದನ ಸೃಜನಶೀಲತೆಗೆ ಹಿಡಿದ ಕನ್ನಡಿ,” ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ಸೂದ್‌ ಹೇಳಿದರು. ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರ ಆಯೋಜಿಸಿದ್ದ ಜಿ.ಎಸ್‌.ಸುಜೀತ್‌ಕುಮಾರ ಅವರ “ದಿ ಬುಲ್‌’ ಕಲಾಕೃತಿಗಳ ಪ್ರದರ್ಶನದಲ್ಲಿ ಮಾತನಾಡಿರು.

Advertisement

“ಶ್ರದ್ಧೆ ಮತ್ತು ನಿರಂತರ ಕಲಿಕೆಯಿಂದ ಅತ್ಯುತ್ತಮ ಕಲಾಕೃತಿ ರಚಿಸಲು ಸಾಧ್ಯ. ಅದರಲ್ಲೂ ಒಂದೇ ವಿಷಯ ಇಟ್ಟುಕೊಂಡು ವಿವಿಧ ಭಾವನೆಗಳನ್ನು ಪ್ರತಿಬಿಂಬಿಸುವ ಕಲಾಕೃತಿಗಳ ರಚನೆ ಕಷ್ಟ. ಸೃಜನಶೀಲ ಕಲಾವಿದ ಮಾತ್ರ ಅಂತಹ ಕಲಾಕೃತಿ ರಚಿಸಬಲ್ಲ. ಸುಜೀತ್‌ಕುಮಾರ್‌ ಅವರು ಅತ್ಯುತ್ತಮ ಕಲಾವಿದ. ಕಲಾಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ,” ಎಂದು ಹೇಳಿದರು. 

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ, “ಯುವ ಕಲಾವಿದ ಸುಜೀತ್‌ ಅವರು ಕಲಾಕ್ಷೇತ್ರದಲ್ಲಿ ಉತ್ತುಂಗಕ್ಕೇರಬೇಕು. ಯಾವುದೇ ಕಲಾಪ್ರಕಾರಗಳು ನಾಡಿನ ಸಾಂಸ್ಕೃತಿಕ ನೆಲೆ, ಶ್ರೀಮಂತಿಕೆಯ ಪ್ರತಿಬಿಂಬ,” ಎಂದರು. ಕಲಾವಿದ ಸುಜೀತ್‌ಕುಮಾರ್‌ ಮಾತನಾಡಿ, “ನಾನು ಗ್ರಾಮೀಣ ಹಿನ್ನೆಲೆಯವ. ನನನ್ನು ಪ್ರೋತ್ಸಾಹಿಸಿದ ಹಿರಿಯ ಕಲಾವಿದ ದಿವಂಗತ ಯುಸೂಫ್ ಅರಕ್ಕಲ್‌ ಅವರಿಗೆ ಈ ಚಿತ್ರಕಲಾ ಪ್ರದರ್ಶನ ಅರ್ಪಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next