Advertisement

ರಂಗು ರಂಗಿನ ಕನಸುಗಳು

10:28 PM Aug 30, 2020 | Karthik A |

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇ ಆದ ಕನಸುಗಳಿರುತ್ತವೆ.

Advertisement

ಚಿಕ್ಕಂದಿನಲ್ಲಿ ಸೂಪರ್‌ ಹೀರೊ ಆಗುವ, ಬಾನಿನಲ್ಲಿ ಹಕ್ಕಿಯಂತೆ ಹಾರುವುದು ನಮ್ಮ ಕನಸುಗಳು ಆಗಿರುತ್ತವೆ.

ನಾವು ಬೆಳೆದಂತೆ ಕನಸುಗಳು ಸಹ ಬದಲಾಗುತ್ತವೆ.

ಶಾಲೆಗೆ ಹೋಗುವಾಗ ಶಿಕ್ಷಕರನ್ನು ಕಂಡಾಗ ನಮಗೂ ಭವಿಷ್ಯದಲ್ಲಿ ಶಿಕ್ಷಕ ಅಥವಾ ಶಿಕ್ಷಕಿ ಆಗುವ ಆಸೆ ಇರುತ್ತದೆ. ಅನಂತರ ಬದಲಾಗುತ್ತದೆ.

ನಾವು ಬಯಸುವುದೊಂದು ಆಗುವುದು ಮತ್ತೂಂದು. ನನ್ನ ಕನಸು ಕೂಡ ಹಾಗೇ. ಬಾಲ್ಯದ ದಿನದ ಕನಸುಗಳು ನೆನಪಿಸಿಕೊಂಡರೆ ನಗು ಬರುತ್ತದೆ. ನಾನು 7ನೇ ತರಗತಿಯವರೆಗೂ ನೀನು ಏನಾಗಬೇಕೆಂದು ಕೇಳಿದರೆ ಒಂದು ನಿಮಿಷ ಅವಧಿಯ ಕಾಲ ಕೂಡ ಯೋಚಿಸದೆ ಶಿಕ್ಷಕಿ ಯಾಗುವ ಕನಸು ಎನ್ನುತ್ತಿದ್ದೆ. ಸಮಯ ಕಳೆದಂತೆ ಕನಸು ಸಹ ಬದಲಾಗಿ ಹೋಯಿತು. ನನಗೆ ವೈದ್ಯಕೀಯ ಕ್ಷೇತ್ರದಲ್ಲಿ ಬಲು ಆಸಕ್ತಿ ಉಂಟಾಯಿತು.

Advertisement

ನನ್ನ ಗೆಳತಿಯು ಸೂಚಿಸಿದಂತೆ ನಾನು ನನ್ನ ಸಹ ಪದವಿ ಪೂರ್ವ ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿದೆ. ಅನಂತರ ಅರಿವಾಯಿತು ಇದು ನನಗೆ ಹೋಲುವಂತಹ ಕ್ಷೇತ್ರವಲ್ಲ, ನನ್ನ ಜೀವನದ ಗುರಿಯು ಬೇರೆ ಎಂದು ಅರಿವಾಯಿತು. ನನಗೆ ಕಲಾ ವಿಭಾಗದಲ್ಲಿ ಆಸಕ್ತಿ ಇರುವುದನ್ನು ಕಂಡುಕೊಂಡೆ. ಈಗ ನಾನು ನನ್ನ ಪದವಿ ಶಿಕ್ಷಣವನ್ನು ಕಲಾ ವಿಭಾಗದಲ್ಲಿ ಮುಂದುವರಿಸುತ್ತಿದ್ದೇನೆ ಹಾಗೂ ಈಗ ನನ್ನ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಹೊಂದಿದ್ದೇನೆ. ಬಾಲ್ಯದ ರಂಗಿನ ಕನಸುಗಳನ್ನು ಪುಟ್ಟ ಪೆಟ್ಟಿಗೆಯಲ್ಲಿ ಅಡವಿಟ್ಟಿ ಬಿಟ್ಟಿದ್ದೇವೆ.

ಏಕೆಂದರೆ ನಾವು ಬಾನಿನಲ್ಲಿ ಹಕ್ಕಿಯಂತೆ ಹಾರಲಾರೆವು ಕಾರಣ ನಮಗೆ ರೆಕ್ಕೆಗಳು ಇಲ್ಲ, ಸೂಪರರ್‌ ಹೀರೊ ಆಗಲಾರೆವು ಕಾರಣ ಅವುಗಳು ಕಾಲ್ಪನಿಕ ಪಾತ್ರಗಳು, ನಿಜಜೀವನದಲ್ಲಿ ಇದು ಅಸಾಧ್ಯ ಎಂಬುದುಜೀವನದ ಒಂದು ಹಂತದಲ್ಲಿ ತಿಳಿದುಕೊಳ್ಳುತ್ತೇವೆ.

 ಜೋಸ್ಲಿನ್‌ ಗಾಮಾ, ಸಂತ ಆಗ್ನೇಸ್‌ ಕಾಲೇಜು, ಮಂಗಳೂರು 

 

Advertisement

Udayavani is now on Telegram. Click here to join our channel and stay updated with the latest news.

Next