Advertisement
ಚಿಟ್ಟೆಗಳ ಉದ್ಯಾನವವವನ್ನು ಲಾಲ್‌ಬಾಗ್‌ನಲ್ಲಿ ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದ್ದು ಈ ಮೂಲಕ ಲಾಲ್‌ಬಾಗ್‌ನ ಸೌಂದರ್ಯ ಹೆಚ್ಚಿಸುವ ಜತೆಗೆ ಸುಮಾರು ವರ್ಷಗಳಿಂದ ಬಳಸದೇ ಖಾಲಿ ಉಳಿದಿದ್ದ ಜಾಗದ ಬಳಕೆಗೆ ಇಲಾಖೆ ಮುಂದಾಗಿದೆ.
Related Articles
Advertisement
ಪರಿಸರ ಸಮೃದ್ಧಿ: ಚಿಟ್ಟೆಗಳು ಅತ್ಯಂತ ಸೂಕ್ಷ್ಮ ಜೀವಿಗಳಾಗಿದು, ಅವುಗಳು ನಗರಪ್ರದೇಶದ ಮಾಲಿನ್ಯ ಪರಿಸರದಲ್ಲಿ ವಾಸಿಸುವುದಿಲ್ಲ. ಸಮೃದ್ಧತೆಯಿಂದ ಕೂಡಿರುವ ಸಮ ಹವಾಗುಣ ಹಾಗೂ ವಾತಾವರಣವಿರಬೇಕು. ಇನ್ನು ಲಾಲ್‌ಬಾಗ್‌ನಲ್ಲಿ ಇಂತಹ ಚಿಟ್ಟೆಗಳಿಗಾಗಿಯೇ ಉದ್ಯಾನ ಸೃಷ್ಟಿಸುವುದರಿಂದ ಉತ್ತಮ ಹಾಗೂ ಸಮೃದ್ಧ ವಾತಾವರಣ ಇರಲಿದೆ. ಅಲ್ಲದೇ ಬೆಂಗಳೂರಿನ ಪರಿಸರದ ಶ್ರೀಮಂತಿಕೆಯನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರು.
ಪಾರ್ಕ್ ನಿರ್ಮಾಣಕ್ಕೆ ವರ್ಷ ಬೇಕು: ಚಿಟ್ಟೆಗಳ ಪಾರ್ಕ್ ನಿರ್ಮಾಣ ಸಾಮಾನ್ಯ ಪಾರ್ಕ್‌ಗಳ ನಿರ್ಮಾಣದಂತಲ್ಲ. ಚಿಟ್ಟೆಗಳಲ್ಲಿ 300ಕ್ಕೂ ಹೆಚ್ಚು ಪ್ರಭೇದಗಳಿದ್ದು, ಅವುಗಳಲ್ಲಿ ಈ ಭಾಗದ ಚಿಟ್ಟೆಗಳ ಅಧ್ಯಯನ ಮಾಡಿ ಅವು ಆಕರ್ಷಿತವಾಗುವ ಗಿಡಗಳ ಬಗ್ಗೆ ತಿಳಿದು ಆ ಗಿಡಗಳನ್ನು ಬೆಳಸಬೇಕು.
ಜತೆಗೆ ಸಂತಾನೋತ್ಪತ್ತಿ ಪ್ರಕ್ರಿಯೆ ಆನಂತರ ಲಾರ್ವ ಸ್ಥಿತಿಯಿಂದ ಕೋಶ ನಿರ್ಮಾಣವಾಗಿ ಚಿಟ್ಟೆಯಾಗಲು ಅಗತ್ಯವಿರುವ ಗಿಡಬೆಳಸಬೇಕು. ಇನ್ನು ಆರಂಭದಲ್ಲಿ ಬರುವ ಚಿಟ್ಟೆಗಳಿಗೆ ಸಂತಾನೋತ್ಪತ್ತಿಗೆ ಯಾವುದೇ ಅಡಚಣೆಯಾಗದಂತದೆ ನೋಡಿಕೊಳ್ಳಬೇಕು.
ಆಗ ಮಾತ್ರವೇ ಚಿಟ್ಟೆಗಳ ಸಂಖ್ಯೆ ಹೆಚ್ಚಾಗುವ ಜತೆಗೆ ನಿರಂತರವಾಗಿ ಚಿಟ್ಟೆಗಳು ಹಾರಿ ಬರುತ್ತವೆ. ಮುಂದಿನ ದಿನಗಳಲ್ಲಿ ಈ ಸ್ಥಳಕ್ಕೆ ಹೊಂದಿಕೆಯಾದ ಮೇಲೆ ಚಿಟ್ಟೆ ಉದ್ಯಾನವನ ಪ್ರಕ್ರಿಯೆ ಪೂರ್ಣವಾಗುತ್ತದೆ ಇದಕ್ಕೆ ಸುಮಾರು 1 ವರ್ಷವಾದರೂ ಸಮಯಬೇಕು ಎನ್ನುತ್ತಾರೆ ಮಂಗಳೂರಿನ ಖಾಸಗಿ ಬಟರ್‌ಪ್ಲೆ„ಪಾರ್ಕ್ ಮಾಲೀಕ ಸಮ್ಮಿಲನ್ ಶೆಟ್ಟಿ.
ಸಿದ್ದಾಪುರ ಗೇಟ್‌ಬಳಿಯ ಖಾಲಿ ಜಾಗವನ್ನು ಬಳಸಿಕೊಳ್ಳುವ ಉದ್ದೇಶದಿಂದ ಚಿಟ್ಟೆ ಪಾರ್ಕ್ ಯೋಜನೆ ರೂಪಿಸಲಾಗಿದೆ. ಈ ಕುರಿತು ತಜ್ಞರ ಜತೆಗೆ ಸೇರಿ ಚರ್ಚಿಸಲಾಗುತ್ತಿದ್ದು, ಮುಂದಿನ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು. ಲಾಲ್‌ಬಾಗ್‌ನಲ್ಲಿ ಅಗತ್ಯ ಸೌಲಭ್ಯಗಳಿರುವುದರಿಂದ ಈ ಕಾಮಗಾರಿಗೆ ದೊಡ್ಡ ಪ್ರಮಾಣದ ಖರ್ಚು ಬರುವುದಿಲ್ಲ.ಎಂ.ಆರ್. ಚಂದ್ರಶೇಖರ್, ಉಪನಿರ್ದೇಶಕರು ತೋಟಗಾರಿಕಾ ಇಲಾಖೆ * ಜಯಪ್ರಕಾಶ್ ಬಿರಾದಾರ್