Advertisement

ಲಂಕೆಗೆ ತವರಿನಲ್ಲೇ ವೈಟ್‌ವಾಶ್‌ ಇಂಗ್ಲೆಂಡ್‌ 3-0 ಇತಿಹಾಸ​​​​​​​

06:15 AM Nov 27, 2018 | Team Udayavani |

ಕೊಲಂಬೊ: ಆತಿಥೇಯ ಶ್ರೀಲಂಕಾವನ್ನು ಕೊಲಂಬೊ ಟೆಸ್ಟ್‌ ಪಂದ್ಯದಲ್ಲೂ ಮಣಿಸಿದ ಇಂಗ್ಲೆಂಡ್‌, 3 ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಇದರೊಂದಿಗೆ 56 ವರ್ಷಗಳ ಬಳಿಕ ವಿದೇಶದಲ್ಲಿ ಅಸಾಮಾನ್ಯ ಪ್ರದರ್ಶನವೊಂದನ್ನು ತೋರ್ಪಡಿಸಿದೆ.

Advertisement

ಗೆಲುವಿಗೆ 327 ರನ್ನುಗಳ ಗುರಿ ಪಡೆದ ಶ್ರೀಲಂಕಾ, ಪಂದ್ಯದ 4ನೇ ದಿನವಾದ ಸೋಮವಾರ 284 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್‌ಗಳಾದ ಮೊಯಿನ್‌ ಅಲಿ ಮತ್ತು ಜಾಕ್‌ ಲೀಚ್‌ ತಲಾ 4 ವಿಕೆಟ್‌ ಹಾರಿಸಿ ಲಂಕನ್ನರ ಕತೆ ಮುಗಿಸಿದರು. ಗಾಲೆ ಹಾಗೂ ಕ್ಯಾಂಡಿಯಲ್ಲಿ ನಡೆದ ಮೊದಲೆರಡು ಟೆಸ್ಟ್‌ ಪಂದ್ಯಗಳನ್ನು ಗೆಲ್ಲುವ ಮೂಲಕ ಜೋ ರೂಟ್‌ ಪಡೆ ಸರಣಿ ಜಯಿಸಿತ್ತು. ಈಗ ವೈಟ್‌ವಾಶ್‌ ಸಾಧನೆ ಮೂಲಕ ಏಶ್ಯದಲ್ಲಿ ಮೊದಲ ಬಾರಿಗೆ 3-0 ಪರಾಕ್ರಮ ದಾಖಲಿಸಿದೆ.

ಭಾರತೀಯ ಉಪಖಂಡದಲ್ಲಿ ಯಾವತ್ತೂ ಸ್ಪಿನ್‌ ದಾಳಿಗೆ ತತ್ತರಿಸುವ ಇಂಗ್ಲೆಂಡ್‌ ಈ ಬಾರಿ ಸ್ಪಿನ್‌ ಶಕ್ತಿ ಮೂಲಕವೇ ಎದುರಾಳಿಯನ್ನು ಕಟ್ಟಿಹಾಕಿದ್ದು ವಿಶೇಷವಾಗಿತ್ತು. ಅಲ್ಲದೇ ಸ್ಪಿನ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುವ ಮೂಲಕವೂ ಇಂಗ್ಲೆಂಡ್‌ ಸುದ್ದಿಯಾಯಿತು. 3 ಪಂದ್ಯಗಳ ಈ ಸರಣಿಯಲ್ಲಿ ಉದುರಿದ 116 ವಿಕೆಟ್‌ಗಳಲ್ಲಿ ಭರ್ತಿ 100 ವಿಕೆಟ್‌ಗಳು ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದಿದ್ದವು.

ಚೇಸಿಂಗ್‌ ವೇಳೆ ಶ್ರೀಲಂಕಾ ತುಸು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಆಡಿದ್ದರೆ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು. ಏಂಜೆಲೊ ಮ್ಯಾಥ್ಯೂಸ್‌ (86), ರೋಷನ್‌ ಸಿಲ್ವ (65), ಕೊನೆಯಲ್ಲಿ ಪುಷ್ಪಕುಮಾರ (ಔಟಾಗದೆ 42) ಉತ್ತಮ ಹೋರಾಟ ಪ್ರದರ್ಶಿಸಿದ್ದರು. ಆದರೆ ಉಳಿದವರು ಇಂಗ್ಲೆಂಡ್‌ ದಾಳಿಯನ್ನು ನಿಭಾಯಿಸುವಲ್ಲಿ ವಿಫ‌ಲರಾದರು.

ಸ್ಕೋರ್‌ಪಟ್ಟಿ
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌        336
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌        240
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌        230
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 327 ರನ್‌)
ದನುಷ್ಕ ಗುಣತಿಲಕ    ಸಿ ಸ್ಟೋಕ್ಸ್‌ ಬಿ ಅಲಿ    6
ದಿಮುತ್‌ ಕರುಣರತ್ನೆ    ಬಿ ಅಲಿ    23
ಧನಂಜಯ ಡಿ’ಸಿಲ್ವ    ಎಲ್‌ಬಿಡಬ್ಲ್ಯು ಲೀಚ್‌    0
ಕುಸಲ್‌ ಮೆಂಡಿಸ್‌    ರನೌಟ್‌    86
ಏಂಜೆಲೊ ಮ್ಯಾಥ್ಯೂಸ್‌    ಸಿ ಬ್ರಾಡ್‌ ಬಿ ಸ್ಟೋಕ್ಸ್‌    5
ಲಕ್ಷಣ ಸಂದಕನ್‌    ಸಿ ಸ್ಟೋಕ್ಸ್‌ ಬಿ ಲೀಚ್‌    7
ರೋಷನ್‌ ಸಿಲ್ವ    ಎಲ್‌ಬಿಡಬ್ಲ್ಯು ಅಲಿ    65
ನಿರೋಷನ್‌ ಡಿಕ್ವೆಲ್ಲ    ಸಿ ಜೆನ್ನಿಂಗ್ಸ್‌ ಬಿ ಲೀಚ್‌    19
ದಿಲುÅವಾನ್‌ ಪೆರೆರ    ಸಿ ಜೆನ್ನಿಂಗ್ಸ್‌ ಬಿ ಅಲಿ    5
ಸುರಂಗ ಲಕ್ಮಲ್‌    ಎಲ್‌ಬಿಡಬ್ಲ್ಯು ಲೀಚ್‌    11
ಮಲಿಂದ ಪುಷ್ಪಕುಮಾರ    ಔಟಾಗದೆ    42
ಇತರ        15
ಒಟ್ಟು  (ಆಲೌಟ್‌)        284
ವಿಕೆಟ್‌ ಪತನ: 1-15, 2-24, 3-34, 4-52, 5-82, 6-184, 7-214, 8-225, 9-226.
ಬೌಲಿಂಗ್‌:
ಸ್ಟುವರ್ಟ್‌ ಬ್ರಾಡ್‌        5-0-14-0
ಮೊಯಿನ್‌ ಅಲಿ        26-3-92-4
ಜಾಕ್‌ ಲೀಚ್‌        28.4-4-72-4
ಬೆನ್‌ ಸ್ಟೋಕ್ಸ್‌        9-1-25-1
ಆದಿಲ್‌ ರಶೀದ್‌        19-1-73-0
ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೊ

Advertisement

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಇಂಗ್ಲೆಂಡ್‌ ತನ್ನ ಟೆಸ್ಟ್‌ ಇತಿಹಾಸದಲ್ಲಿ 3ನೇ ಸಲ ವಿದೇಶದಲ್ಲಿ ಟೆಸ್ಟ್‌ ಸರಣಿಯೊಂದನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡಿತು (ಕನಿಷ್ಠ 3 ಪಂದ್ಯಗಳ ಸರಣಿ). ಇದಕ್ಕೂ ಮುನ್ನ 1885-86ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಿಂದ, 1962-63ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತ್ತು. ಇಂಗ್ಲೆಂಡ್‌ ತಂಡ ಏಶ್ಯದಲ್ಲಿ ಕ್ಲೀನ್‌ಸಿÌàಪ್‌ ಸಾಧನೆಗೈದದ್ದು ಇದೇ ಮೊದಲು.
* ಶ್ರೀಲಂಕಾ 3ನೇ ಸಲ ತವರಿನಲ್ಲಿ ಟೆಸ್ಟ್‌ ಸರಣಿಯ ಎಲ್ಲ ಪಂದ್ಯಗಳನ್ನು ಸೋತ ಅವಮಾನಕ್ಕೆ ಸಿಲುಕಿತು (ಕನಿಷ್ಠ 3 ಪಂದ್ಯಗಳ ಸರಣಿ). ಇದಕ್ಕೂ ಮೊದಲು 2003-04ರಲ್ಲಿ ಆಸ್ಟ್ರೇಲಿಯ ವಿರುದ್ಧ ಹಾಗೂ ಕಳೆದ ವರ್ಷ ವರ್ಷ ಭಾರತದ ವಿರುದ್ಧ 0-3 ಅಂತರದಿಂದ ಸರಣಿ ಕಳೆದುಕೊಂಡಿತ್ತು.
* ಇದು ಏಶ್ಯದಲ್ಲಿ ವಿದೇಶಿ ತಂಡವೊಂದರಿಂದ ದಾಖಲಾದ 3ನೇ ಕ್ಲೀನ್‌ಸಿÌàಪ್‌ ಪರಾಕ್ರಮ. 2002-03ರಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ಥಾನವನ್ನು, 2003-04ರಲ್ಲಿ ಆಸ್ಟ್ರೇಲಿಯ ತಂಡ ಶ್ರೀಲಂಕಾವನ್ನು 3-0 ಅಂತರದಿಂದ ಮಣಿಸಿತ್ತು.
* ಶ್ರೀಲಂಕಾದಲ್ಲಿ ಆಡಲಾದ ಮೂರೂ ಮಾದರಿಗಳಲ್ಲೂ ಸರಣಿ ವಶಪಡಿಸಿಕೊಂಡ 3ನೇ ತಂಡವೆಂಬ ಹಿರಿಮೆ ಇಂಗ್ಲೆಂಡ್‌ನ‌ದ್ದಾಯಿತು. 2015ರಲ್ಲಿ ಪಾಕಿಸ್ಥಾನ, 2017ರಲ್ಲಿ ಭಾರತ ಇದೇ ಸಾಧನೆ ತೋರ್ಪಡಿಸಿತ್ತು.
* ಎರಡನೇ ಸಲ ತವರಿನಲ್ಲಿ ಆಡಲಾದ 3 ಪ್ಲಸ್‌ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಆಟಗಾರರು ಶತಕ ಬಾರಿಸಲು ವಿಫ‌ಲರಾದರು. 1999ರ ಆಸ್ಟ್ರೇಲಿಯ ಎದುರಿನ ಸರಣಿಯಲ್ಲೂ ಲಂಕಾ ಆಟಗಾರರಿಂದ ಶತಕ ದಾಖಲಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next