ನವದೆಹಲಿ: ಕರ್ನಾಟಕ, ಮದ್ರಾಸ್ ಹಾಗೂ ಕೋಲ್ಕತಾ ಹೈಕೋರ್ಟ್ ಸೇರಿದಂತೆ ಮೂರು ಹೈಕೋರ್ಟ್ ಗಳಿಗೆ 19 ಹಿರಿಯ ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ಗೆ 5 ಮಂದಿ, ಮದ್ರಾಸ್ ಹೈಕೋರ್ಟ್ ಗೆ 9 ಹಾಗೂ ಕೋಲ್ಕತಾ ಹೈಕೋರ್ಟ್ 5 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿರುವುದಾಗಿ ವರದಿ ವಿವರಿಸಿದೆ.
ಕರ್ನಾಟಕ ಹೈಕೋರ್ಟ್ ಗೆ ಐವರು:
ರಾಜ್ಯ ಹೈಕೋರ್ಟ್ ವಕೀಲರಾದ ಕೃಷ್ಣ ದೀಕ್ಷಿತ್, ಎಸ್ ಜಿ ಪಂಡಿತ್, ಆರ್.ದೇವದಾಸ್, ಬಿಎಂ ಶ್ಯಾಮ್ ಪ್ರಸಾದ್ ಸುನಿಲ್ ದತ್ ಯಾದವ್ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಜಸ್ಟೀಸ್ ಜೆ.ಚಲಮೇಶ್ವರ್ ಹಾಗೂ ಜಸ್ಟೀಸ್ ರಂಜನ್ ಗೋಗೊಯ್ ಅವರನ್ನೊಳಗೊಂಡ ಕೊಲಿಜಿಯಂ, 23 ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡುವಂತೆ ಶಿಫಾರಸು ಮಾಡಿದೆ.
ಕೋಲ್ಕತಾ ಹೈಕೋರ್ಟ್:ಶ್ರೀಮತಿ ಶಂಪಾ ಸರ್ಕಾರ್, ಸವ್ಯಸಾಚಿ ಚೌಧುರಿ, ರವಿ ಕೃಷ್ಣನ್ ಕಪೂರ್, ಅರಿಂದಾಮ್ ಮುಖರ್ಜಿ, ಸಾಖ್ಯಾ ಸೇನ್ ಅವರನ್ನು ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಮದ್ರಾಸ್ ಹೈಕೋರ್ಟ್:
ಸಿ.ಎಮಾಲಿಯಾಸ್, ಪಿಟಿ ಆಶಾ, ಎಂ.ನಿರ್ಮಲ್ ಕುಮಾರ್, ಸುಬ್ರಮಣಿಯಮ್ ಪ್ರಸಾದ್, ಸೆಂಥಿಲ್ ಕುಮಾರ್ ರಾಮಮೂರ್ತಿ, ಎನ್. ಆನಂದ್ ವೆಂಕಟೇಶ್, ಜಿಕೆ ಇಳಂತಿರೆಯಾನ್, ಕೃಷ್ಣನ್ ರಾಮಸ್ವಾಮಿ ಹಾಗೂ ಸಿ.ಸರವಣನನ್ ಅವರನ್ನು ಮದ್ರಾಸ್ ಹೈಕೋರ್ಟ್ ಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.