ಸಿಕ್ಕಿತ್ತು. ಈಗ ಖುಷಿ ಪಡುವ ಸರದಿ ಕಾಲೇಜು ಪ್ರಾಧ್ಯಾಪಕರದ್ದು. ಹತ್ತು ವರ್ಷಗಳ ಬಳಿಕ ಎಂಟು ಲಕ್ಷ ಕಾಲೇಜು ಪ್ರಾಧ್ಯಾಪಕರ ವೇತನ ಹೆಚ್ಚಳಕ್ಕೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ಯ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿ
ಫೆಬ್ರವರಿಯಲ್ಲಿಯೇ ವರದಿ ಸಲ್ಲಿಸಿತ್ತು. ಆಂಗ್ಲ ದೈನಿಕವೊಂದರ ವರದಿ ಪ್ರಕಾರ, ಈ ತಿಂಗಳಲ್ಲೇ ಕೇಂದ್ರ ಸಂಪುಟ ಸಭೆ ಸೇರಿ ಶಿಫಾರಸುಗಳಿಗೆ ಅಂಗೀಕಾರ ನೀಡುವ ಸಾಧ್ಯತೆ ಇದೆ. ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಮಾತ್ರ ಅನುಮೋದನೆ ನೀಡುವ ಸಾಧ್ಯತೆ ಇದ್ದು, ಭತ್ಯೆ ಮತ್ತಿತರ ವಿಚಾರಗಳ ಬಗ್ಗೆ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ
ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
Advertisement
ಎಷ್ಟು ಹೆಚ್ಚಳ?: ಸಹಾಯಕ ಪ್ರಾಧ್ಯಾಪಕ (ಅಸಿಸ್ಟೆಂಟ್ ಪ್ರೊಫೆಸರ್ ಗ್ರೇಡ್-1)ರಿಗೆ ವೇತನ ಪ್ರಮಾಣ ಪ್ರತಿ ತಿಂಗಳಿಗೆ 10,396 ರೂ.ಗಳಷ್ಟು ಹೆಚ್ಚಾಗಲಿದೆ. ಸಹ ಪ್ರಾಧ್ಯಾಪಕ (ಅಸೋಸಿ ಯೇಟ್ ಪ್ರೊಫೆಸರ್)ರಿಗೆ 23,662 ರೂ. ಪರಿಷ್ಕರಣೆಯಾಗಲಿದೆ. ಅಂದರೆ ಸುಮಾರು ಶೇ.22-ಶೇ.28ರ ವರೆಗೆ ಹೆಚ್ಚಳ. 10 ವರ್ಷಗಳ ಹಿಂದೆ ಅಂದರೆ 2006ರಲ್ಲಿ ವೇತನ ಪರಿಷ್ಕರಣೆಯಾಗಿತ್ತು. ಅದನ್ನು ಹೆಚ್ಚಳ ಮಾಡದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಪ್ರಾಧ್ಯಾಪಕರ ಸಂಘಗಳು ಎಚ್ಚರಿಕೆ ನೀಡಿದ್ದವು.
ಯುವ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಕೇಂದ್ರೀಯ ವಿವಿಗಳು, ಕೇಂದ್ರ ಸರ್ಕಾರಿಂದ ಸ್ಥಾಪನೆಗೊಂಡ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್‌ಐಟಿ ಸೇರಿದಂತೆ ಹಲವು ಸಂಸ್ಥೆಗಳಿಗೆ ನೆರವಾಗಲಿದೆ. 70 ಸಾವಿರ ಕೋಟಿ ರೂ. ಹೊರೆ: ಶೀಘ್ರದಲ್ಲಿಯೇ ನಡೆಯುವ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 70 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಇದರ ಜತೆಗೆ ವಾರ್ಷಿಕವಾಗಿ ಕಾಲೇಜು ಪ್ರಾಧ್ಯಾಪಕರ ಮೌಲ್ಯಮಾಪನ ಪದ್ಧತಿಯೂ ಬದಲಾಗಲಿದೆ. ಅವರಿಗೆ ಗ್ರೇಡಿಂಗ್ ನೀಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ.