ಮೈಸೂರು: ನಗರದ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಹಾಗೂ ಜೆಎಸ್‌ಎಸ್ ವಿಜಾnನ ಮತ್ತು ತಂತ್ರಜಾnನ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಿರುವ ಜೇಸಿಯಾನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೆಗಾ ಮ್ಯಾರಥಾನ್‌ನಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹೆಜ್ಜೆಹಾಕಿದರು.
ದೇಶದ ಪ್ರತಿಯೊಂದು ಗ್ರಾಮಗಳನ್ನೂ ಡಿಜಿಟಲೀಕರಣಗೊಳಿಸಿ ಜನರ ಇಚ್ಛೆಗೆ ಅನುಗುಣವಾಗಿ ಪಾರದರ್ಶಕ ಆಡಳಿತ ನಡೆಸುವ ಉದ್ದೇಶದಿಂದ ಆಯೋಜಿಸಿದ್ದ ಡಿಜಿಟಲ್ ಇಂಡಿಯಾ ಓಟಕ್ಕೆ ಅರಣ್ಯಾನಿ ಚಿತ್ರತಂಡದ ಸದಸ್ಯರು ಚಾಲನೆ ನೀಡಿದರು. ಓಟದ ಅಂಗವಾಗಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸಲಾಗಿತ್ತು.
ಅದರಂತೆ ಎಸ್.ಜೆಸಿಇ ಕಾಲೇಜಿನಿಂದ ಅಮರ್ ಬೇಕರಿ, ಕುಕ್ಕರಹಳ್ಳಿ ಕೆರೆ, ಪೈರ್ ಬ್ರಿಗೇಂಡ್, ಹನುಮಂತ ಹೋಟೆಲ್, ಬೇಕ್ ಪಾಯಿಂಟ್ ಮೂಲಕ ಮಾರುತಿ ಟೆಂಟ್ ಮಾರ್ಗವಾಗಿ ಸಂಚರಿಸಿ ಎಸ್‌ಜೆಸಿಇ ಕಾಲೇಜಿನಲ್ಲಿ ಮುಕ್ತಾಯಗೊಂಡಿತು. ಪುರುಷರ ವಿಭಾಗದಲ್ಲಿ ಚೇತನ್(ಪ್ರ), ಪ್ರಶಾಂತ್ ಕುಮಾರ್(ದ್ವಿ) ಹಾಗೂ ಪ್ರಕಾಶ್(ತೃ) ಬಹುಮಾನ ತಮ್ಮದಾಗಿಸಿಕೊಂಡರು.
ಇನ್ನೂ ಯುವತಿಯರಿಗಾಗಿ ಆಯೋಜಿಸಿದ್ದ ಮ್ಯಾರಥಾನ್ ಓಟ ಕಾಲೇಜಿನಿಂದ ಅಮರ್ ಬೇಕರಿ, ಕುಕ್ಕರಹಳ್ಳಿ ಕೆರೆ ರಸ್ತೆಯಲ್ಲಿ ಸಂಚರಿಸಿ ಕಾಲೇಜಿನಲ್ಲಿ ಅಂತ್ಯಗೊಂಡಿತು. ಮಹಿಳಾ ವಿಭಾಗದಲ್ಲಿ ಸುಪ್ರೀತಾ(ಪ್ರ), ಪ್ರಣೀತ(ದ್ವೀ) ಹಾಗೂ ಅನಿತಾ(ತೃ) ಸ್ಥಾನ ಪಡೆದರು.
ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ವಿತರಿಸಲಾಯಿತು. ಅರಣ್ಯಾನಿ ಚಿತ್ರತಂಡದ ನಟರಾದ ಅಂಜನ್, ತೇಜಸ್, ಸಂತೋಷ್ ಹಾಗೂ ನಟಿ ತೇಜು ಪೊನ್ನಪ್ಪ ಹಾಜರಿದ್ದರು.