Advertisement

ಕಾಲೇಜ್‌ ಕುಮಾರ್‌ಗೆ ಸಂಯುಕ್ತಾ ಡೇಟ್ಸ್‌ ಕಿರಿಕ್‌

11:40 AM May 09, 2017 | |

ಮೊನ್ನೆಯಷ್ಟೇ “ಕಾಲೇಜ್‌ ಕುಮಾರ್‌’ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದಿದೆ. ನಾಯಕ ವಿಕ್ಕಿ ಹಾಗೂ ನಾಯಕಿ ಸಂಯುಕ್ತಾ ಹೆಗಡೆಯ ಫೋಟೋಶೂಟ್‌ ಕೂಡಾ ಕಲರ್‌ಫ‌ುಲ್‌ ಆಗಿ ಮಾಡಿಮುಗಿಸಿದ್ದಾರೆ ನಿರ್ದೇಶಕ ಸಂತು. ಈಗ “ಕಾಲೇಜ್‌ ಕುಮಾರ್‌’ ಚಿತ್ರೀಕರಣದಲ್ಲಿ ಬಿಝಿ. ಹೀಗಿರುವಾಗಲೇ ನಾಯಕಿ ಸಂಯುಕ್ತಾ ಹೆಗಡೆ ಡೇಟ್ಸ್‌ ಸಮಸ್ಯೆಯಿಂದ ಚಿತ್ರತಂಡ ಹಾಗೂ ಸಂಯುಕ್ತಾ ನಡುವೆ ಸಣ್ಣಮಟ್ಟದ ಗೊಂದಲ ಉಂಟಾಗಿದೆ. 

Advertisement

ಸಂಯುಕ್ತಾ ಹೆಗಡೆ “ಕಾಲೇಜ್‌ ಕುಮಾರ್‌’ ಚಿತ್ರ ಒಪ್ಪಿಕೊಂಡು ಫೋಟೋಶೂಟ್‌ನಲ್ಲೂ ಭಾಗಿಯಾಗಿದ್ದರು. ಆದರೆ, ಈಗ ಪ್ರಭುದೇವ ನಟಿಸುತ್ತಿರುವ ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡಿರುವ ಸಂಯುಕ್ತಾ ತನಗೆ ಹತ್ತು ದಿನಗಳ ಕಾಲ ಡೇಟ್‌ ಬಿಟ್ಟುಕೊಡಬೇಕು, ನಾನು ತಮಿಳು ಸಿನಿಮಾದಲ್ಲಿ ನಟಿಸಬೇಕಿದೆ ಎಂದು ಕೇಳಿದ್ದಾರೆ. ಆದರೆ, “ಕಾಲೇಜ್‌ ಕುಮಾರ್‌’ ಚಿತ್ರತಂಡ ಮೊದಲೇ ಶೆಡ್ನೂಲ್‌ ಪ್ಲ್ರಾನ್‌ ಮಾಡಿದ್ದರಿಂದ ಹತ್ತು ದಿನ ಬಿಟ್ಟುಕೊಡಲು ಸಾಧ್ಯವಿಲ್ಲ.

ಕೊಟ್ಟ ಡೇಟ್‌ ಪ್ರಕಾರ ಚಿತ್ರೀಕರಣ ಮುಗಿಸಿಕೊಟ್ಟು, ನೀವು ಯಾವ ಸಿನಿಮಾಕ್ಕಾದರೂ ಹೋಗಿ ಎಂದು “ಕಾಲೇಜ್‌ ಕುಮಾರ್‌’ ತಂಡ ಹೇಳಿದೆ. ಆದರೆ, ಸಂಯುಕ್ತಾ ಮಾತ್ರ ತಮಿಳು ಸಿನಿಮಾಕ್ಕೆ ಹೋಗಲೇಬೇಕೆಂದಾಗ ವಿಷಯ ನಿರ್ಮಾಪಕರ ಸಂಘಕ್ಕೆ ಹೋಗಿದೆ. ಸಂಘದ ಕಾರ್ಯದರ್ಶಿ ಸೂರಪ್ಪ ಬಾಬು ಅವರು ಸಂಯುಕ್ತಾ ಅವರನ್ನು ಕರೆಸಿ, “ಮೊದಲು ನೀವು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿಕೊಡಿ.

ಆ ನಂತರ ತಮಿಳು ಸಿನಿಮಾ ಮಾಡಿ. ಏಕಾಏಕಿ ನೀವು ಬಿಟ್ಟು ಹೋದರೆ ನಿರ್ಮಾಪಕರಿಗೆ ಸಮಸ್ಯೆಯಾಗುತ್ತದೆ’ ಎಂದಿದ್ದಾರೆ. ಆದರೆ, ಸಂಯುಕ್ತಾ ಕಡೆಯಿಂದ ಆಶಾದಾಯಕ ಉತ್ತರ ಬಂದಿಲ್ಲ ಎನ್ನಲಾಗಿದೆ. ಅಂತಿಮವಾಗಿ ಮಾತುಕತೆ ನಡೆದು ನಿರ್ಮಾಪಕರಲ್ಲಿ ಚಿತ್ರೀಕರಣ ಮುಗಿಸಿಕೊಡುವುದಾಗಿ ಹೇಳಿದ್ದಾರೆನ್ನಲಾಗಿದೆ. “ಕಾಲೇಜ್‌ ಕುಮಾರ್‌ ಚಿತ್ರೀಕರಣ ನಡೆಯುತ್ತಿದೆ. ಸಂಯುಕ್ತಾಗೆ ತಮಿಳು ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿರುವುದರಿಂದ ಡೇಟ್ಸ್‌ ಬಿಟ್ಟುಕೊಡಿ ಎಂದು ಕೇಳಿದ್ದಾರೆ.

ಆದರೆ ನಾವು ಎಲ್ಲಾ ತಯಾರಿ ನಡೆಸಿರುವಾಗ ಡೇಟ್ಸ್‌ ಬಿಟ್ಟು ಕೊಡಲು ಹೇಗೆ ಸಾಧ್ಯ?’ ಎಂಬುದು ನಿರ್ದೇಶಕ ಸಂತು ಮಾತು. ಡೇಟ್ಸ್‌ ವಿವಾದವಾದ ನಂತರ ಸಂಯುಕ್ತಾ ಹೆಗಡೆ ತಮ್ಮ ಫೇಸ್‌ಬುಕ್‌ನಲ್ಲಿ “ಕನ್ನಡ ನನ್ನ ಮಾತೃಭಾಷೆ. ಯಾವತ್ತಿದ್ದರೂ ಕನ್ನಡಕ್ಕೆ ನನ್ನ ಮೊದಲ ಆದ್ಯತೆ. ಕನ್ನಡ ಭಾಷೆಯನ್ನು ನಾನು ತುಂಬಾ ಗೌರವಿಸುತ್ತೇನೆ. ನಾನು ಯಾರಲ್ಲೂ ತಪ್ಪಾಗಿ ಮಾತನಾಡಿಲ್ಲ. ಈ ಕುರಿತು ಯಾರಿಗೂ ವಿವರಿಸುವ ಅಗತ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

Advertisement

“ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂಯುಕ್ತಾ ಹೆಗಡೆ ಸದ್ಯ ಅನೀಶ್‌ ತೇಜೇಶ್ವರ್‌ ನಾಯಕರಾಗಿರುವ “ವಾಸು’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next