Advertisement

ಟ್ಯಾಬ್‌ನಿಂದ ರಾಸುಗಳ ನೈಜ ಮಾಹಿತಿ ಸಂಗ್ರಹಿಸಿ

10:46 AM Aug 14, 2020 | Suhan S |

ಮಾಲೂರು: ಗ್ರಾಮಗಳಿಗೆ ತೆರಳಿ ಯೂನಿ ತಂತ್ರಜ್ಞಾನ ಮೂಲಕ ಹಸುಗಳ ಮಾಹಿತಿಯನ್ನು ಸಂಗ್ರಹಿಸಲು 23 ಮಂದಿ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಅತ್ಯಾಧುನಿಕ ತಂತ್ರ ಜ್ಞಾನವುಳ್ಳ ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಕೆ. ವೈ.ನಂಜೇಗೌಡ ತಿಳಿಸಿದರು.

Advertisement

ಪಟ್ಟಣದ ಕೋಚಿಮುಲ್‌ ಶಿಬಿರ ಕಚೇರಿಯ ಸಭಾಂಗಣದಲ್ಲಿ 23 ಮಂದಿಗೆ ಟ್ಯಾಬ್‌ಗಳನ್ನು ವಿತರಿಸಿ ಮಾತನಾಡಿ, ಹಸುಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಕೇಂದ್ರ ಸರಕಾರ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟ್ಯಾಬ್‌ ನೀಡಿ, ಗ್ರಾಮಗಳಲ್ಲಿ ಹಸುಗಳ ಗರ್ಭಧಾರಣೆ, ಕರು ಹಾಕುವುದು, ಹಾಲಿನ ಸಂಗ್ರಹಣೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದೆ ಎಂದರು.

ಕೋಚಿಮುಲ್‌ ಹಾಗೂ ಪಶುವೈದ್ಯಕೀಯ ಇಲಾಖೆಯವರು ಗ್ರಾಮಗಳಿಗೆ ತೆರಳಿ ಹಸುಗಳು ಹಾಗೂ ಮಾಲಿಕರ ಹೆಸರನ್ನು ನೋಂದಣೆ ಮಾಡಿಕೊಂಡು ಕಿವಿಗೆ ಓಲೆಯನ್ನು ಹಾಕಿ ಬಾರ್‌ ಕೋಡ್‌ ನೀಡುವರು. ಇದೊಂದು ಉತ್ತಮ ತಂತ್ರಜ್ಞಾನವಾಗಿದ್ದು, ಇದರಿಂದ ಹೆಚ್ಚಿನ ಹಾಲು ಸಂಗ್ರಹಣೆಗೂ ಅನುಕೂಲವಾಗುತ್ತಿದೆ. ಕಿವಿಗೆ ಓಲೆ ಹಾಕಿದರೆ ವಿಮೆಯನ್ನು ಮಾಡಿಸಲು ಸಹ ಸಹಕಾರಿಯಾಗುತ್ತದೆ ಎಂದರು.

ಕೃತಕ ಗರ್ಭದಾರಣೆ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಹಸುಗಳ ಮಾಲಿಕರಿಂದ ನೈಜ ಮಾಹಿತಿಯನ್ನು ಸಂಗ್ರಹಿಸಿ ಟ್ಯಾಬ್‌ನಲ್ಲಿ ದಾಖಲು ಮಾಡುವಂತೆ ತಿಳಿಸಿದ ಅವರು, ಹಸುಗಳಮಾಲಿಕರು ಸಹ ಮಾಹಿತಿ ನೀಡಿ ಸಹಕರಿಸುವಂತೆ ತಿಳಿಸಿದರು. ಈ ವೇಳೆ ಕೋಚಿಮುಲ್‌ ಮಹಿಳಾ ನಿರ್ದೇಶಕಿ ಕಾಂತಮ್ಮ, ಅಂಜನಿ ಸೋಮಣ್ಣ, ಉಪವ್ಯವಸ್ಥಾಪಕ ಡಾ.ಚೇತನ್‌, ವಿಸ್ತರಣಾಧಿಕಾರಿಗಳಾದ ಆರ್‌.ನಾರಾಯಣಸ್ವಾಮಿ, ಮನೋಹರರೆಡ್ಡಿ, ಹುಲ್ಲೂರಪ್ಪ, ನರಸಿಂಹರೆಡ್ಡಿ, ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next