Advertisement
ಅಲೊವೆರಾ
Related Articles
Advertisement
ಕೊಲಾಜೆನ್ ಮತ್ತು ಹ್ಯಾಲುರಾನಿಕ್ ಆಮ್ಲ – ಇವೆರಡೂ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಅಂಶಗಳಾಗಿದ್ದು, ವಿಟಮಿನ್ ಸಿ ಮತ್ತು ಅಮೈನೊ ಆಮ್ಲಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಈ ಎರಡು ಅಂಶಗಳ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಕಿತ್ತಳೆ, ಕೆಂಪು ದೊಣ್ಣೆ ಮೆಣಸು, ಕಾಲೆ, ಬ್ರಾಕೊಲಿ, ಬ್ರಸೆಲ್ಸ್ ಮೊಳಕೆ ಮತ್ತು ಸ್ಟ್ರಾಬೆರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ.
ಜಿನ್‌ಸೆಂಗ್
ಪನಾಕ್ಸ್ ಜಿನ್‌ಸೆಂಗ್ ಸಸ್ಯವು ಮುಪ್ಪಾಗುವಿಕೆಯನ್ನು ತಡೆಯುವ ಗುಣ ಹೊಂದಿರುವುದು ಶ್ರುತಪಟ್ಟಿದೆ. ಚರ್ಮವು ತನ್ನ ಸಹಜ ಸ್ವರೂಪವನ್ನು ಉಳಿಸಿಕೊಳ್ಳಲು ಜಿನ್‌ಸೆಂಗ್ ಸಹಾಯ ಮಾಡುತ್ತದೆ ಮತ್ತು ಅನೇಕ ರಾಸಾಯನಿಕ ಔಷಧಗಳಂತೆ ಋಣಾತ್ಮಕ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಚರ್ಮಕ್ಕೆ ಹೀರಿಕೆಯಾಗುತ್ತದೆ. ಸೂರ್ಯನ ಅತಿನೇರಳೆ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯುವ ಸಾಮರ್ಥ್ಯ ಜಿನ್ ಸೆಂಗ್‌ಗೆ ಇದೆ. ಇದು ಕೊಲಾಜೆನ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ ಎಂಬುದಾಗಿಯೂ ತಿಳಿದುಬಂದಿದೆ. ಜಿನ್‌ಸೆಂಗ್ ಚಹಾ ಕುಡಿದಾಗ ಅಥವಾ ಸಪ್ಲಿಮೆಂಟ್ ಆಗಿ ಸೇವಿಸಿದಾಗ ರಕ್ತ ಪ್ರವಾಹಕ್ಕೆ ಬಿಡುಗಡೆಯಾ ಗುವ ಆ್ಯಂಟಿ ಓಕ್ಸಿಡೆಂಟ್ ಗಳು ಆರೋಗ್ಯ ಪೂರ್ಣ ಜೀವಕೋಶಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಚರ್ಮ ಹೊಳೆಯಲು ಸಹಾಯ ಮಾಡುತ್ತವೆ.
ಕೊತ್ತಂಬರಿಸೊಪ್ಪು
ನಾವು ಅಡುಗೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೊತ್ತಂಬರಿ ಸೊಪ್ಪು ಒಂದು ಉತ್ತಮ ಮೂಲಿಕೆಯೂ ಆಗಿದೆ. ಇದರಲ್ಲಿ ಕೊಲಾಜೆನ್ ಸಂಯೋಜನೆಯನ್ನು ವೃದ್ಧಿಸುವ ವಿಟಮಿನ್ ಸಿ ಇದೆ. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಲಿನೊಲೆನಿಕ್ ಆಮ್ಲವು ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ರಕ್ತಪ್ರವಾಹದಲ್ಲಿ ಸೇರಿಕೊಂಡು ಚರ್ಮದ ಆರೋಗ್ಯಪೂರ್ಣ ಜೀವಕೋಶಗಳಿಗೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್‌ಗಳನ್ನು ಇದರಲ್ಲಿ ಇರುವ ಆ್ಯಂಟಿಓಕ್ಸಿಡೆಂಟ್‌ಗಳು ನಿವಾರಿಸುತ್ತವೆ. ಕೊತ್ತಂಬರಿ ಸೊಪ್ಪಿನ ಸಾರ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಇದನ್ನು ಸೇವಿಸುವ ಮೂಲಕ ದೇಹದಿಂದ ವಿಷಾಂಶ ನಿವಾರಣೆಗೆ ನೆರವಾಗಬಹುದು.
ಪಾಚಿಸಾರ
ಸೌಂದರ್ಯವರ್ಧಕ ಸಾಮಗ್ರಿ ಗಳಲ್ಲಿ ಈಗ ಸಮುದ್ರ ಸಸ್ಯಗಳಿಂದ ಪಡೆದ ಅಂಶಗಳನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. “ಆಕ್ಸಿಡೇಶನ್’ ಅಥವಾ ಮಾಲಿನ್ಯದಂತಹ ಬಾಹ್ಯ ಅಂಶಗಳಿಗೆ ಚರ್ಮವು ತೆರೆದುಕೊಳ್ಳುವುದರಿಂದ ಜೀವಕೋಶ ಬೆಳವಣಿಗೆಗೆ ಅಡಚಣೆ ಉಂಟಾಗಬಹುದಾಗಿದ್ದು, ಇದು ಚರ್ಮಕ್ಕೆ ಹಾನಿ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ. ಪಾಚಿಸಾರವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಆಕ್ಸಿಡೇಶನ್‌ನಿಂದ ಕೊಲಾಜೆನ್ ನಾಶಗೊಳ್ಳುವುದನ್ನು ತಪ್ಪಿಸುತ್ತದೆ. ಬಹುತೇಕ ಎಲ್ಲ ಪ್ರಮುಖ ಆರೋಗ್ಯ ಆಹಾರ ಮಳಿಗೆಗಳಲ್ಲಿ ಬಾಯಿಯ ಮೂಲಕ ಸೇವಿಸಬಹುದಾದ ಸಪ್ಲಿಮೆಂಟ್ ಆಗಿ ಪಾಚಿಸಾರ ಲಭ್ಯವಿರುತ್ತದೆ.
ಏನು ಮಾಡಬಾರದು?
ಚರ್ಮವು ಯೌವ್ವನಪೂರ್ಣ ಮತ್ತು ಆರೋಗ್ಯಯುತವಾಗಿ ಇರಬೇಕಾಗಿದ್ದರೆ ಬಿರುಬಿಸಿಲಿಗೆ ಒಡ್ಡಿಕೊಳ್ಳಬೇಡಿ. ಧೂಮಪಾನವು ಚರ್ಮದ ಆರೋಗ್ಯಕ್ಕೆ ಒಳಿತಲ್ಲ, ಬೇಗನೆ ನೆರಿಗೆಗಟ್ಟುವಂತೆ ಮಾಡುತ್ತದೆ. ಹೊರಾಂಗಣದಲ್ಲಿ ಇರುವ ವೇಳೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಕೊಲಾಜೆನ್ ಸಪ್ಲಿಮೆಂಟ್‌ಗಳಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಅಲರ್ಜಿ ಉಂಟಾಗುವುದು, ಸಂಧಿ ನೋವು ಮತ್ತು ಕ್ಯಾಲ್ಸಿಯಂ ಹೆಚ್ಚು ಉತ್ಪಾದನೆಯಾಗುವುದು ಇಂಥ ಅಡ್ಡ ಪರಿಣಾಮಗಳಲ್ಲಿ ಕೆಲವು. ಸಮುದ್ರ ಆಹಾರ ಅಥವಾ ಮಾಂಸದ ಉತ್ಪನ್ನಗಳನ್ನು ಉಪಯೋಗಿಸಿದಾಗ ನಿಮಗೆ ಅಡ್ಡ ಪರಿಣಾಮಗಳು ಉಂಟಾಗಿದ್ದರೆ ಯಾವುದೇ ಬಗೆಯ ಕೊಲಾಜೆನ್ ಸಪ್ಲಿಮೆಂಟ್ ತೆಗೆದುಕೊಳ್ಳುವಾಗ ಅತ್ಯಂತ ಎಚ್ಚರಿಕೆ ವಹಿಸಿ.
-ಡಾ| ವಿನಾಯಕ್ ಎನ್. ಅಂಚನ್,
ಅಸಿಸ್ಟೆಂಟ್ ಪ್ರೊಫೆಸರ್,
ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ, ಕೆಎಂಸಿ , ಮಂಗಳೂರು)