Advertisement
ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಇದು ರಾಜ್ಯದಲ್ಲಿಯೇ ಅತ್ಯಧಿಕ. ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಕನಿಷ್ಠ ಎಂದರೆ 15.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಉಡುಪಿಯಲ್ಲಿ 32.1 ಡಿಗ್ರಿ, ಉತ್ತರ ಕನ್ನಡದಲ್ಲಿ 31.6, ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ 30.0 ಡಿಗ್ರಿ, ಶಿವಮೊಗ್ಗ 30.8 ಡಿಗ್ರಿ, ಕೊಡಗು 28.4 ಹಾಸನ 28.9 ಡಿಗ್ರಿ ಸೆಲ್ಸಿಯಸ್ ಇತ್ತು. ರಾಜಧಾನಿ ಬೆಂಗಳೂರು ನಗರದಲ್ಲಿ 28.8 ಡಿಗ್ರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27.9 ಡಿಗ್ರಿ ಉಷ್ಣಾಂಶ ಇತ್ತು.
Related Articles
Advertisement
ಇದನ್ನೂ ಓದಿ:ಹಿಮವರ್ಷ: ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೂ ಅಡ್ಡಿ
ಕಡಿಮೆ ಮಳೆ ಮಳೆಯ ಲೆಕ್ಕಾಚಾರ ಗಮನಿಸಿದರೆ, ಈ ವರ್ಷ ಡಿಸೆಂಬರ್ ತನಕವೂ ಮಳೆ ಬಂದಿದ್ದರೂ, ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 400 ಸೆ.ಮೀ. ಬರಬೇಕಾಗಿದ್ದರೂ, ಈ ವರ್ಷ 396.3 ಸೆ.ಮೀ. ಮಳೆ ಮಾತ್ರ ಬಂದಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಸೆಕೆ ಆರಂಭ
ಪ್ರಸ್ತುತ ವರ್ಷ ಚಳಿಗಾಲದ ಅವಧಿ ಕಡಿಮೆ. ಹಾಗಾಗಿ ಸೆಕೆಗಾಲ ಬೇಗನೆ ಆರಂಭವಾಗಿದೆ. ಈ ವರ್ಷ ಉಷ್ಣಾಂಶವು ಕನಿಷ್ಠ ಮಟ್ಟಕ್ಕೆ ಹೋಗಲೇ ಇಲ್ಲ; ಇನ್ನು ಕಡಿಮೆ ಆಗುವ ಸಾಧ್ಯತೆ ಇಲ್ಲ. ಏರುತ್ತಲೇ ಹೋಗುತ್ತದೆ.
– ರಾಜೇಗೌಡ,
ಹವಾಮಾನ ತಜ್ಞ , ಬೆಂಗಳೂರು