ದೇವನಹಳ್ಳಿ: ತಾಲೂಕಿನ ಪೂಜನಹಳ್ಳಿಯಲ್ಲಿರುವ ಗಾಂಧಿ ಶತಮಾನದ ತೋಟಕ್ಕೆ ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಫೌಝಿಯಾ ತರುನ್ನುಮ್ ದಿಢೀರ್ ಭೇಟಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀತಲ ಸರಪಳಿ ಘಟಕದ ಕಾಮಗಾರಿಯ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕಿ, ಕೆಫೆಟ್ ವತಿಯಿಂದ 24 ಕೋಟಿ ರೂ. ವೆಚ್ಚದಲ್ಲಿ ಶೀತಲ ಸರಪಳಿ ಮತ್ತು ಹಣ್ಣು ಮತ್ತುತರಕಾರಿಗಳ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಮಳೆ, ಕೊರೊನಾದಿಂದಾಗಿ ವಿಳಂಬವಾಗಿತ್ತು. ಕಾಮಗಾರಿಯುತಳಪಾಯ ಹಂತದಲ್ಲಿದ್ದು, ಮುಂದಿನ ನವೆಂಬರ್ ವೇಳೆಗೆ ಮುಗಿಸಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಪೂಜನಹಳ್ಳಿಯ ತೋಟಗಾರಿಕಾ ಕ್ಷೇತ್ರದನಾಲ್ಕು ಎಕರೆ ಪ್ರದೇಶದಲ್ಲಿ 24 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮಗ್ರ ಶೀತಲ ಘಟಕವು, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳ ಮಾವು, ದ್ರಾಕ್ಷಿ, ದಾಳಿಂಬೆ, ಗುಲಾಬಿ, ಸೇವಂತಿಗೆ ವಿವಿಧ ರೀತಿಯ ತರಕಾರಿಯನ್ನು ಬೆಳೆಯುವ ರೈತರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತರಿಗೆ ಹೆಚ್ಚು ಅನುಕೂಲ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರ ಉತ್ಪನ್ನಗಳನ್ನು ರಫ್ತುದಾರರು ನೇರವಾಗಿ ಖರೀದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ ವಿಮಾನದ ಮೂಲಕ ಹೊರರಾಜ್ಯ, ದೇಶಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ. ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಬೇಳೆ ಕಾಳು ಸಂಗ್ರಹ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಸಮೀಪದಲ್ಲಿರುವುದರಿಂದ ಇತರೆ ದೇಶಗಳಿಗೆ ಇಲ್ಲಿಂದಲೇ ಹಣ್ಣು ರಫ್ತು ಮಾಡಲು ಸಹಕಾರಿಯಾಗಲಿದೆ. ಶೀತಲ ಸರಪಳಿ ಘಟಕ, ಶೀತಲ ಗೃಹ, ಪ್ಯಾಕ್ ಹೌಸ್, ಹಣ್ಣು ಮಾಗಿಸುವ ಘಟಕ, ಬಿಸಿ ನೀರಿನಲ್ಲಿ ಶಾಖೋಪಕರಣ ಘಟಕ, ಪ್ರಯೋಗಾಲಯ ಮುಂತಾದವುಗಳನ್ನು ಸ್ಥಾಪಿಸಲಾಗುತ್ತದೆ. ಈ ಎಲ್ಲಾ ಘಟಕಗಳಲ್ಲಿ ಒಣದ್ರಾಕ್ಷಿ, ದಾಳಿಂಬೆ, ನಿಂಬೆ ವಿವಿಧ ರೀತಿಯ ಬೇಳೆ ಕಾಳುಗಳನ್ನು ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈತರಿಗೆ ಸಾಕಷ್ಟು ಅನುಕೂಲವಾಗಬೇಕು. ನರೇಗಾ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ತರಕಾರಿ ಹಣ್ಣು ಬೆಳೆಯುವ ರೈತರು ಕಂಪನಿಗಳನ್ನು ಪರಿಚಯ ಮಾಡಿಕೊಟ್ಟು, ಅವರಿಂದ ಆದಾಯವನ್ನು ರೈತರುಹೆಚ್ಚಿಸಿಕೊಳ್ಳುವಂತೆ ಆಗಬೇಕು. ರೈತರು ಬೆಳೆದರೆ ಸಾಲದು, ಆರ್ಥಿಕವಾಗಿ ಸದೃಢಗೊಳ್ಳಲು ಗುಣಮಟ್ಟದ ಬೆಳೆ ಇಟ್ಟು ಲಾಭ ಪಡೆಯುವಂತೆ ಆಗಬೇಕು ಎಂದು ವಿವರಿಸಿದರು.
ಈ ವೇಳೆಯಲ್ಲಿ ಉಪವಿಭಾಗಾಧಿಕಾರಿಅರುಳ್‌ಕುಮಾರ್, ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತೊಟಗಾರಿಕೆಯ ಎಡಿಎಚ್ ರಾಜೇಂದ್ರ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು.