Advertisement

ಮಳೆಗೆ ಅರಳಿದ ಕಾಫಿ ಹೂ: ಬೆಳೆಗಾರರ ಮೊಗದಲ್ಲಿ ಸಂತಸ

03:57 PM Mar 30, 2022 | Team Udayavani |

ಆಲ್ದೂರು: ಈ ಬಾರಿ ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಫಿ ಹೂ ಉತ್ತಮವಾಗಿ ಅರಳಿದ್ದು ಕಾಫಿ ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಹಲವು ವರ್ಷಗಳ ನಂತರ ಈ ಬಾರಿ ಮಾರ್ಚ್‌ ತಿಂಗಳಲ್ಲಿ ಉತ್ತರಭಾದ್ರೆ ಮಳೆ ಉತ್ತಮವಾಗಿ ಆಗಿದ್ದು ಕಾಫಿ ಹೂ ಅರಳಲು ಅನುಕೂಲವಾಗಿದೆ.

Advertisement

ಆಲ್ದೂರು ಸುತ್ತಮುತ್ತಲಿನ ಬಹುತೇಕ ಕಾಫಿ ತೋಟಗಳಲ್ಲಿ ಕಾಫಿ ಹೂ ಅರಳಿದ್ದು ಎಲ್ಲೆಡೆ ಮಲ್ಲಿಗೆ ಹೂ ಚೆಲ್ಲಿದಂತೆ ಭಾಸವಾಗುತ್ತಿದ್ದು ಕಾಫಿ ತೋಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸುತ್ತಿದೆ. ಸಾಮಾನ್ಯವಾಗಿ ರೋಬಸ್ಟಾ ಕಾಫಿ ಬೆಳೆಗಾರರು ಕಾಫಿ ತೋಟಗಳಿಗೆ ನೀರು ಹಾಯಿಸಿದ್ದು ಈಗಾಗಲೇ ಕಾಫಿ ಹೂ ಅರಳಿವೆ. ಕಳೆದ 10 ದಿನಗಳ ಹಿಂದೆ ಸುರಿದ ಉತ್ತರಭಾದ್ರ ಮಳೆಗೆ ಅರೇಬಿಕಾ ಕಾಫಿ ತೋಟಗಳಲ್ಲಿ ಹೂ ಅರಳಿದ್ದು ನೋಡುಗರ ಮನಸೂರೆಗೊಳ್ಳುತ್ತಿವೆ.

ಕಾಫಿ ಹೂ ಉತ್ತಮವಾಗಿ ಆಗಿದ್ದು ಈ ಬಾರಿ ಕಾಫಿ ಧಾರಣೆಯು ಹೆಚ್ಚಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಕಾಫಿ ತೋಟಗಳಲ್ಲಿ ಹೂ ಅರಳಲು ಮಳೆ ಎಷ್ಟು ಮುಖ್ಯವೋ, ಹೂ ಅರಳಿದ ನಂತರ ಮಳೆ ಬಾರದಿರುವುದು ಅಷ್ಟೇ ಪ್ರಮುಖವಾಗಿರುತ್ತದೆ.

ಕಾಫಿ ತೋಟಗಳಲ್ಲಿ ಹೂ ಅರಳಿದ್ದು ಕಳೆದ ಎರಡು ದಿನಗಳು ಮಳೆ ಬಿಡುವು ನೀಡಿದ್ದು ಅನುಕೂಲವಾಗಿದೆ. ಈ ಬಾರಿ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಕಾಫಿ ಬೆಳೆಗಾರ ಡಿ.ಪಿ. ನಾಗೇಶ್‌.

Advertisement

Udayavani is now on Telegram. Click here to join our channel and stay updated with the latest news.

Next