ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾಫಿ ಬೆಳೆಗಾರ ಮೂಗಿಗೆ ತುಪ್ಪ ಸವರದೆ ಬೆಳೆಗಾರರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ಮುಂದಿನದಿನಗಳಲ್ಲಿ ಕಾಫಿ ಮಂಡಳಿ ಎದುರು ಧರಣಿ ನಡೆಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಎಚ್ಚರಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪ, ಬೆಲೆಕುಸಿತದಿಂದ ಬೆಳೆಗಾರರು ಮತ್ತು ಕಾರ್ಮಿಕರುಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದ್ದುಉದ್ಯಮ ನಶಿಸಿ ಹೋಗುವ ಆತಂಕ ಕಾಡುತ್ತಿದೆ ಎಂದರು.
ಉದ್ಯಮ ಹಾಗೂ ಬೆಳೆಗಾರರಿಂದಾಗಿಕೇಂದ್ರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಿದೇಶಿ ವಿನಿಮಯ ಬರುತ್ತಿದೆ. ಇಂತಹ ಪ್ರತಿಷ್ಠೆಯ ಉದ್ಯಮದವರು ಇತ್ತೀಚೆಗೆ ಅತಿವೃಷ್ಟಿ, ಕಾಫಿ, ಕಾಳು ಮೆಣಸು ಬೆಳೆಗಳ ಬೆಲೆ ಕುಸಿತದಂತಹಕಾರಣದಿಂದಾಗಿ ಭಾರೀ ಸಮಸ್ಯೆಗೆ ಸಿಲುಕಿದ್ದಾರೆ.ಬೆಳೆಗಾರರು ನೆರವಿಗಾಗಿ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಬೆಳೆಗಾರರ ಸಮಸ್ಯೆಗಳಿಗೆಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿಪರಿಗಣಿಸದೇ ನಿರ್ಲಕ್ಷ್ಯ ಧೋರಣೆ ತಾಳಿದೆಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರು ಬೆಳೆಗಾರರ ಸಮಸ್ಯೆಯಲ್ಲಿದ್ದಾಗ ವಿದರ್ಭ ಪ್ಯಾಕೇಜ್ ಘೋಷಿಸಿ ಬೆಳೆಗಾರರಿಗೆ ಪರಿಹಾರ ನೀಡಲಾಗಿತ್ತು. ಬೆಳೆಗಾರರಿಗೆ ಕಾಫಿ ಮಂಡಳಿ ಮೂಲಕ ಸಹಾಯಧನ ನೀಡಲಾಗಿತ್ತು. ಕಾಫಿ ಉದ್ಯಮದ ಪುನಶ್ಚೇತನಕ್ಕೆ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಫಿ ಮಂಡಳಿ ಮೂಲಕ ಬೆಳೆಗಾರರಿಗೆ ಸಿಗುತ್ತಿದ್ದ ಎಲ್ಲ ನೆರವನ್ನೂ ರದ್ದು ಮಾಡಿದೆ ಎಂದರು. ಸದ್ಯ ಕಾಫಿ ಕೃಷಿಗೆ ಬಳಸುವ ಕೀಟನಾಶಕ,ಗೊಬ್ಬರ, ಯಂತ್ರೋಪಕರಣಗಳ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಿಗೆ ಸಿಗುತ್ತಿದ್ದಸಬ್ಸಿಡಿಯೂ ಸಿಗುತ್ತಿಲ್ಲ. ಕಾರ್ಮಿಕರೂ ಕೆಲಸಕ್ಕೆ ಸಿಗುತ್ತಿಲ್ಲ. ಇತ್ತೀಚೆಗೆ ಕೇಂದ್ರದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ವಿಡಿಯೋ ಸಂವಾದದಲ್ಲಿ ಬೆಳಗಾರರ ನೆರವಿಗೆ ಮತ್ತೆ ಭರವಸೆ ನೀಡಿದ್ದಾರೆ. ಆದರೆ ಯಾವ ನೆರವೂ ಸಿಕ್ಕಿಲ್ಲ.ಬಿಜೆಪಿ ಸರ್ಕಾರ ಬೆಳೆಗಾರರ ವಿರೋಧಿ ನಿಲುವು ತಳೆದಿದೆ ಎಂದರು.
ಬೆಳೆಗಾರರ ನೆರವಿಗೆ ಬರಬೇಕಾದ ಕಾಫಿ ಮಂಡಳಿ ನಾಮಕಾವಸ್ಥೆ ಸಂಸ್ಥೆಯಾಗಿದೆ. ಸಿಬ್ಬಂದಿ ಪುಕ್ಕಟೆ ಸಂಬಳ ಪಡೆಯುತ್ತಿದ್ದಾರೆ. ಉದ್ಯಮ ಏಳಿಗೆಗೆ ಯಾವುದೇ ಸಂಶೋಧನೆ ಕೈಗೊಂಡಿಲ್ಲ.ಬೋರ್ಡ್‌ನ ಅಧ್ಯಕ್ಷರು, ಸೆಕ್ರೆಟರಿ ಇತ್ತೀಚೆಗೆ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಸಮೀಕ್ಷೆ ನಡೆಸಿದ್ದಾರೆ. ಆದರೆ, ಕಾಫಿ ಮಂಡಳಿ ಉದ್ಯಮದಪುನಃಶ್ಚೇತನಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಕಾಫಿ ಮಂಡಳಿ ಅಧ್ಯಕ್ಷರು ಇದೇಜಿಲ್ಲೆಯವರಾಗಿದ್ದು, ಅವರು ನಾಮಕಾವಸ್ಥೆಗೆಅಧ್ಯಕ್ಷರಾಗಿರದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಬೆಳೆಗಾರರ ಪರಧ್ವನಿ ಎತ್ತಬೇಕು. ಬೆಳೆಗಾರಸಮಸ್ಯೆ ಬಗ್ಗೆ ಮಾತನಾಡಬೇಕಾದ ಕ್ಷೇತ್ರದ ಜನಪ್ರತಿನಿಧಿಗಳು ಜಿಲ್ಲೆಗೆ ಸಂಬಂಧಿಸದ ಲವ್ ಜಿಹಾದ್ ಬಗ್ಗೆ ಮಾತನಾಡಿ ರಾಜಕಾರಣ ಮಾಡುತ್ತಿದ್ದಾರೆಂದು ಟೀಕಿಸಿದರು. ಕೇಂದ್ರ ಸರ್ಕಾರ ಮುಂದಿನ ಒಂದು ತಿಂಗಳೊಳಗೆ ಕಾಫಿ ಬೆಳೆಗಾರರ ನೆರವಿಗೆ ಮುಂದಾಗದಿದ್ದಲ್ಲಿ ಕಾಫಿ ಮಂಡಳಿ ಎದುರು ಧರಣಿ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಪ್ಪ, ರಮೇಶ್, ಪ್ರವೀಣ್, ಆನಂದೇಗೌಡ ಇದ್ದರು.