Advertisement
ಬೇಕಾಗುವ ವಸ್ತುಗಳುಉದ್ದದ ಪೇಪರ್ ಕಪ್, ಚಾಕು
ಜಾದೂಗಾರನ ಮುಂದೆ ಒಂದು ಪೇಪರ್ ಕಪ್ ಇರುತ್ತದೆ. ಆತ ಅದನ್ನು ನೆರೆದಿರುವ ಪ್ರೇಕ್ಷಕರಿಗೆ ಎತ್ತಿ ತೋರಿಸುತ್ತಾನೆ. ನಂತರ ಆ ಕಪ್ ಅನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳುತ್ತಾನೆ. ಆಮೇಲೆ ನಿಧಾನಕ್ಕೆ ಒಂದು ಕೈಯನ್ನು ಕಪ್‌ನಿಂದ ದೂರ ತೆಗೆದುಕೊಂಡು ಹೋಗುತ್ತಾನೆ. ಕಪ್ ಗಾಳಿಯಲ್ಲಿ ತೇಲಲು ಶುರು ಮಾಡುತ್ತದೆ. ತಯಾರಿ
ಈ ಜಾದೂವಿನ ರಹಸ್ಯ ಅಡಗಿರುವುದು ನೀವು ಹಿಡಿದಿರುವ ಪ್ಲಾಸ್ಟಿಕ್ ಲೋಟದಲ್ಲಿ. ಅಂದರೆ, ನೀವು ಜಾದೂಗೆ ಬಳಸುವ ಕಪ್‌ನ ಹಿಂಭಾಗದಲ್ಲಿ ಚಾಕೂವಿನಿಂದ ಸಣ್ಣ ಗೀರು ಮಾಡಿಟ್ಟುಕೊಳ್ಳಿ. ಆ ರೀತಿ ರಂಧ್ರ ಮಾಡಿರುವುದು ನೋಡುಗರಿಗೆ ಕಾಣಿಸುವಂತಿರಬಾರದು. ನಂತರ ಆ ರಂಧ್ರದೊಳಗೆ ನಿಮ್ಮ ಹೆಬ್ಬೆರಳನ್ನು ತೂರಿಸಿ. ಇನ್ನೊಂದು ಕೈಯನ್ನು ನಿಧಾನವಾಗಿ ಕಪ್‌ನಿಂದ ದೂರಕ್ಕೆ ತೆಗೆದುಕೊಂಡು ಹೋಗಿ. ಜೊತೆಗೆ ಹೆಬ್ಬೆರಳೊಂದನ್ನು ಬಿಟ್ಟು ಉಳಿದ ಬೆರಳುಗಳು ಸಹ ಕಪ್ ಅನ್ನು ಹಿಡಿದುಕೊಳ್ಳದಿರಲಿ. ಈಗ ಇಡೀ ಕಪ್‌ನ ಬ್ಯಾಲೆನ್ಸ್ ನಿಮ್ಮ ಹೆಬ್ಬೆರಳಿನಲ್ಲೇ ಇರುತ್ತದೆ. ನೋಡುಗರಿಗೆ ಅದು ಕಾಣಿಸದೇ ಇರುವುದರಿಂದ ಕಪ್ ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ.
Related Articles
Advertisement