ಮುಂಬೈ: ಜನಪ್ರಿಯತೆಗಾಗಿ ಜನ ಮುಗಿಬೀಳುತ್ತಾರೆ. ಅದಕ್ಕಾಗಿ ಹಂಬಲಿಸಿ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಕೆಲವರಿಗೆ ಈ ಜನಪ್ರಿಯತೆ ಯಾಕಾದರೂ ಬಂತು, ಇದರಿಂದ ತಮ್ಮ ಜೀವನವೇ ಹಾಳಾಗುತ್ತಿದೆ ಎಂಬ ಕೊರಗೂ ಕಾಡುತ್ತದೆ. ಅಂತಹದೊಂದು ನೋವಿಗೆ, ಖನ್ನತೆಗೆ ಒಳಗಾಗಿರುವುದು ಅಮೆರಿಕದ ವಿಶ್ವವಿಖ್ಯಾತ ಟೆನಿಸ್ ತಾರೆ, ಕೇವಲ 16 ವರ್ಷದ ಕೊಕೊ ಗಾಫ್!
ಈಕೆಗೆ ಕೇವಲ 15 ವರ್ಷದವರಿದ್ದಾಗಲೇ ವಿಪರೀತ ಜನಪ್ರಿಯತೆ ಬಂದು ಮುಗಿಬಿದ್ದಿದೆ. ಅದು ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಅದರಿಂದ ಆಡುವ ಆನಂದವನ್ನೇ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿದೆ. ಜನರಿಗೋಸ್ಕರ ಆಡುತ್ತಿದ್ದೇನೋ, ತನಗಾಗಿ ಆಡುತ್ತಿದ್ದೇನೋ ಗೊತ್ತಾಗದೆ ಅವರು ಒದ್ದಾಡುತ್ತಿದ್ದಾರೆ.
ಅವರನ್ನು ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಹೋಲಿಸುತ್ತಿರುವುದರಿಂದ, ಪ್ರತೀಬಾರಿಯೂ ಅಮೋಘವಾಗಿ ಆಟವನ್ನೇ ಆಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ತಾನೀಗ ತ್ತಲಲ್ಲಿದ್ದೇನೆ, ಒಂದು ವರ್ಷ ಕ್ರೀಡೆಯಿಂದಲೇ ದೂರಾಗಲು ಚಿಂತಿಸುತ್ತಿದ್ದೇನೆಂದು ಗಾಫ್ ಹೇಳಿಕೊಂಡಿದ್ದಾರೆ. ಅವರ ಅಂತರಂಗದ ತುಮುಲಗಳು ಹೀಗಿವೆ…
ಯಾರಿಗಾಗಿ ಆಡುತ್ತಿದ್ದೇನೆ?: ಇಷ್ಟರವರೆಗೆ ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆಗಳು ಒಲಿದಿವೆ. ಅದು ನನಗೆ ವಿಪರೀತ ಜನಪ್ರಿಯತೆ ನೀಡಿತು. ಇದನ್ನು ನಾನು ಬಯಸಿರಲಿಲ್ಲ. ಅದರಿಂದ ಪದೇಪದೇ ಅತ್ಯುತ್ತಮವಾಗಿ ಆಡುವ ಒತ್ತಡ ಉಂಟಾಗಿದೆ. 2018ರ ವಿಂಬಲ್ಡನ್‌ಗೂ ಮುಂಚಿನಿಂದಲೇ, ಇದನ್ನೇ ನಾನು ಬಯಸಿದ್ದಾ ಎಂದು ಪ್ರಶ್ನಿಸಿಕೊಳ್ಳಲು ಶುರು ಮಾಡಿದ್ದೆ. ನನಗೆ ಯಶಸ್ಸು ಸಿಕ್ಕಿದೆ. ಅದಲ್ಲ ವಿಷಯ. ನಾನು ಯಾವುದನ್ನು ಪ್ರೀತಿಸುತ್ತಿದ್ದೀನೋ ಅದರಿಂದ ನನಗೆ ಆನಂದವೇ ಸಿಗುತ್ತಿಲ್ಲ. ಆದ್ದರಿಂದ ಜನರಿಗಾಗಿ ಅಲ್ಲ, ನನಗಾಗಿ ಆಡಬೇಕು ಎಂದು ತೀರ್ಮಾನಿಸಿದ್ದೇನೆ. ಕಳೆದ ವರ್ಷ ನಿಜಕ್ಕೂ ಖನ್ನತೆಗೊಳಗಾಗಿದ್ದೆ. ಅದು ನನ್ನ ಪಾಲಿನ ಕಠಿಣ ವರ್ಷ ಖನ್ನತೆಗೊಳಗಾಗಿದ್ದೇನೆ: ಈ ಬಗ್ಗೆ ಖಚಿತ ನಿಲವು ಹೊಂದದಿರುವುದು ಸರಿ. ಆದರೆ ನಾನು ಆ ದಿಕ್ಕಿನಲ್ಲಿ ಹೋಗುತ್ತಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಗೊಂದಲಕ್ಕೊಳಗಾಗಿದ್ದೇನೆ. ತನ್ನ ತುಮುಲಗಳ ಪರಿಣಾಮ, ಸ್ನೇಹಿತರೇ ಇಲ್ಲವಾಗಿದ್ದಾರೆ. ಆದ್ದರಿಂದ ಒಂದು ವರ್ಷ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿದ್ದೇನೆ. ನನ್ನಲ್ಲಿ ವಿಪರೀತ ಯೋಚನೆಗಳು. ಇದನ್ನೇ ನಾನು ಬಯಸಿದ್ದಾ? ಉಳಿದವರು ಏನು ಮಾಡುತ್ತಾರೆ? ಹೀಗೆಲ್ಲ ಚಿಂತೆಗಳು. ಬಹಳ ಸಲ ಕೂತು ಯೋಚಿಸಿದ್ದೇನೆ. ಅತ್ತಿದ್ದೇನೆ, ಕಡೆಗೆ ಅದರಿಂದೆಲ್ಲ ಹೊರಬಂದು, ಮತ್ತಷ್ಟು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ.
ಸೆರೆನಾಗೆ ಹೋಲಿಸಬೇಡಿ: ನನ್ನಂತಹ ಚಿಕ್ಕ ಆಟಗಾರ್ತಿಯನ್ನು ಸೆರೆನಾ ವಿಲಿಯಮ್ಸ್‌ರಂತಹ ಆಟಗಾರ್ತಿಯರಿಗೆ ಹೋಲಿಸುವುದೇ ತಪ್ಪು. ಅವರಂತಹ ಅಗಾಧ ಸಾಧಕಿಯನ್ನು, ನನ್ನಂತಹ ಉದಯೋನ್ಮುಖರಿಗೆ ಹೋಲಿಸುವುದು ಸರಿಯಲ್ಲ. ಆದರೂ ನನಗೆ ಅವರೇ ಮಾದರಿ ಆಟಗಾರ್ತಿ.
ಗಾಫ್ ಸಾಧನೆಯೇನು?
2019ರಲ್ಲಿ ಕೊಕೊ ಗಾಫ್ ಬರೀ 15 ವರ್ಷದವರಿದ್ದಾಗಲೇ ವಿಂಬಲ್ಡನ್ ಗ್ರ್ಯಾನ್ ಸ್ಲಾéಮ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ಈ ವರ್ಷ ಮತ್ತೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ದಿಗ್ಗಜ ಆಟಗಾರರನ್ನೇ ಸೋಲಿಸಿಬಿಟ್ಟರು. ಇದರಿಂದ ಆಕೆ ಜನಪ್ರಿಯತೆಯ ತುದಿಗೇರಿದರು. ಮಾತ್ರವಲ್ಲ ವಿಶ್ವ ಮಹಿಳಾ ಶ್ರೇಯಾಂಕದಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದರು. ಕಳೆದ 15 ವರ್ಷದಲ್ಲೇಈ ವಯಸ್ಸಿನ ಆಟಗಾರ್ತಿಯರುಮಾಡದ ಸಾಧನೆಯಿದು.