Advertisement
ಆರಂಭದಲ್ಲಿ ನಿಯಮ 330ರ ಅಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿಷಯ ಪ್ರಸ್ತಾವಿಸಿ, ಕಂಬಳಕ್ಕೆ ತನ್ನದೇ ಆದ ಇತಿಹಾಸವಿದೆ. ಕರಾವಳಿಯಲ್ಲಿ ಕೋಣಗಳು ಕೃಷಿ ಬದುಕಿನ ಅವಿಭಾಜ್ಯ ಅಂಗ. ಕಂಬಳದ ಕೋಣಗಳನ್ನು ಸಾಕುವುದು ಪ್ರತಿಷ್ಠೆ ಎಂದರು.
Related Articles
Advertisement
ಕಂಬಳಕ್ಕೆ ಪ್ರೋತ್ಸಾಹ ಸರಕಾರದ ಕರ್ತವ್ಯಕಂಬಳ ಮಾತ್ರ ಅಲ್ಲ; ಕರಾವಳಿ ಎಂದರೆ ಯಕ್ಷಗಾನ, ಕೋಳಿ ಅಂಕ, ಪಾಡªನ ಸೇರಿದಂತೆ ಹಲವು ಸಂಸ್ಕೃತಿಗಳ ಸಮ್ಮಿಲನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸುವುದು ಸರಕಾರದ ಕರ್ತವ್ಯ ಎಂದು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ದನಿಗೂಡಿಸಿದರು. ಕಂಬಳವನ್ನು ದಸರಾ ಕ್ರೀಡಾಕೂಟದಲ್ಲಿ ಸೇರಿಸಬೇಕು. ಮಂಡ್ಯ, ಮೈಸೂರು ಸುತ್ತ ಭತ್ತದ ಗದ್ದೆಗಳಿವೆ. ಸರಕಾರ ಮನಸ್ಸು ಮಾಡಿದರೆ ಅಲ್ಪಾವಧಿಯಲ್ಲೇ ಕಂಬಳಕ್ಕೆ ಅಗತ್ಯವಿರುವ ಕೆಸರು ಗದ್ದೆ ಗಳನ್ನು ತಯಾರು ಮಾಡಬಹುದು ಎಂದು ಉಪನಾಯಕ ಡಾ| ಕೆ. ಗೋವಿಂದರಾಜು ಅಭಿಪ್ರಾಯ ಪಟ್ಟರು. ಸರಕಾರವು ಪ್ರತೀ ಕಂಬಳಕ್ಕೆ 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ನ ಹರೀಶ್ ಕುಮಾರ್ ಆಗ್ರಹಿಸಿದರು. ಕಂಬಳಕ್ಕೆ ಪ್ರೋತ್ಸಾಹ ನೀಡುವುದು ಸರಕಾರದ ಕರ್ತವ್ಯ ಎಂದು ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು. ಕಂಬಳದ ಆಯೋಜನೆ ದುಬಾರಿಯಾಗಿದೆ. ಇದಕ್ಕೆ ಸರಕಾರ ಸಹಾಯ ಮಾಡಬೇಕು ಎಂದು ಜೆಡಿಎಸ್‌ನ ಭೋಜೇಗೌಡ ಒತ್ತಾಯಿಸಿ ದರು. ಕಂಬಳದ ಕೋಣಗಳನ್ನು, ಅಂಕದ ಕೋಳಿಗಳನ್ನು ಸಾಕುವುದು ಕರಾವಳಿ ಭಾಗದ ಕುಟುಂಬಗಳಿಗೆ ಪ್ರತಿಷ್ಠೆಯಾಗಿದೆ. ಈ ಕ್ರೀಡೆಗಳು ಉಳಿಯಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಶಿಸಿದರು. ಅಧಿವೇಶನ ಮುಗಿದೊಡನೆ ಸಭೆ
ಕಂಬಳವನ್ನು ಪ್ರೋತ್ಸಾಹಿಸಲು ಸಭಾಪತಿ ಯವರ ನೇತೃತ್ವದಲ್ಲಿ ಸಂಬಂಧಪಟ್ಟ ಮೇಲ್ಮನೆ ಸದಸ್ಯರು ಮತ್ತು ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ಕೆ.ಸಿ. ನಾರಾಯಣಗೌಡ ತಿಳಿಸಿದರು. ನಿಯಮ 330ರಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಸ್ತಾವಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಕಂಬಳಕ್ಕೆ ಹೆಚ್ಚು ಶಕ್ತಿ ತುಂಬಲು ಸರಕಾರ ಬದ್ಧವಾಗಿದೆ ಎಂದರು. ಕಂಬಳಕ್ಕೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ. “ಕರ್ನಾಟಕ ಕ್ರೀಡಾ ರತ್ನ’, “ಕ್ರೀಡಾ ಪೋಷಕ’ ಪ್ರಶಸ್ತಿಗಳನ್ನು ಕಂಬಳದ ಬೆಳವಣಿಗೆಗೆ ಗಣನೀಯ ಕೊಡುಗೆ ಕೊಟ್ಟಿರುವವರಿಗೆ ನೀಡಿ ಗೌರವಿಸ ಲಾಗುತ್ತಿದೆ. ಮೂಡುಬಿದಿರೆಯಲ್ಲಿ “ಕೋಟಿ-ಚೆನ್ನಯ’ ಜೋಡುಕರೆ ನಿರ್ಮಾಣ ಮಾಡಲಾಗಿದ್ದು, ವೀಕ್ಷಕರ ಗ್ಯಾಲರಿಯ ಸಹಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ 5 ಎಕರೆಯಲ್ಲಿ “ಲವ-ಕುಶ’ ಕಂಬಳ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ವಿವರಿಸಿದರು.