Advertisement

ಇಂದಿನಿಂದ ಲಸಿಕೆ ನೋಂದಣಿ ಶುರು, ನೋಂದಣಿ ಹೇಗೆ ಮಾಡಬೇಕು?

09:05 AM Apr 28, 2021 | Team Udayavani |

ನವದೆಹಲಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಕೋವಿನ್‌ ವೆಬ್‌ಸೈಟ್‌, ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿ ಏ.28ರಿಂದ ಶುರುವಾಗಲಿದೆ. ಸಂಜೆ 4ಗಂಟೆಗೆ ನೋಂದಣಿ ಶುರು ವಾ ಗ ಲಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಲಭ್ಯವಾಗಲಿದೆ.

Advertisement

ಇದನ್ನೂ ಓದಿ:ನೋಕಿಯಾ 1100 ಮತ್ತು ಭಾವನಾತ್ಮಕ ನಂಟು: ಸಾರ್ವಕಾಲಿಕ ದಾಖಲೆ ಬರೆದಿದೆ ಈ ಪುಟಾಣಿ ಮೊಬೈಲ್ !

ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ಪ್ಯಾನ್‌ ಕಾರ್ಡ್‌ ಅಥವಾ ಪೆನ್ಶನ್ ಪಾಸ್‌ ಪುಸ್ತಕವನ್ನು ದಾಖಲೆಗಳಾಗಿ ಕೊಡಲಾಗಿದೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಇದರ ಜತೆಗೆ ಕೇಂದ್ರ ಸರ್ಕಾರದ “ಉಮಂಗ್‌’ ವೆಬ್‌ಸೈಟ್‌ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಮೇ 1ರಿಂದ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ.

ಇದೇ ವೇಳೆ, ಮಂಗಳವಾರ ಟ್ವೀಟ್‌ ಮಾಡಿದ ಕರ್ನಾಟಕ ಸಿಎಂ ಯಡಿಯೂರಪ್ಪ, ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯಾದ್ಯಂತ 18-44 ವರ್ಷ ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕೇಂದ್ರದ ಯೋಜನೆ ಮುಂದುವರಿಯಲಿದೆ. ಎಲ್ಲರೂ ಏ.28ರಿಂದ ನೋಂದಣಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನೋಂದಣಿ ಹೇಗೆ ಮಾಡಬೇಕು?
1)cowin.gov.inಗೆ ಲಾಗ್‌ಇನ್‌ ಆಗಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ

Advertisement

2)ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌ ನಮೂದಿಸಿ.

3)ನಂತರ ವೆರಿಫೈ ಬಟನ್‌ ಒತ್ತಿ.

4)ಲಸಿಕೆ ನೋಂದಣಿ ಎಂಬ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಫೋಟೋ ಇರುವ ಗುರುತಿನ ಚೀಟಿ (4 ಆಯ್ಕೆಗಳು)ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.

5)ನಿಮ್ಮ ಹೆಸರು, ವಿಳಾಸ ಲಿಂಗ, ವಾಸಸ್ಥಳ ನಮೂದಿಸಿ.

6)ಬಳಿಕ ರಿಜಿಸ್ಟರ್‌ ಎಂಬ ಬಟನ್‌ ಒತ್ತಿ. ಆಗ ಯಶಸ್ವಿ ನೋಂದಣಿ ಬಗ್ಗೆ ಸಂದೇಶ ಬರುತ್ತದೆ ಮತ್ತು ಅಕೌಂಟ್‌ ಡಿಟೇಲ್ಸ್‌ ಎಂಬ ಪುಟ ಓಪನ್‌ ಆಗುತ್ತದೆ.

7)ಇಲ್ಲಿ ನೀವು ಲಸಿಕೆ ಪಡೆಯುವ ದಿನಾಂಕ, ಇಷ್ಟಾದ ಬಳಿಕ ನಿಮ್ಮ ವ್ಯಾಪ್ತಿಯಲ್ಲಿ ಇರುವ ಲಸಿಕಾ ಕೇಂದ್ರ/ಆಸ್ಪತ್ರೆಗಳ ವಿವರ ಸ್ಕ್ರೀನ್‌ ಮೇಲೆ ಮೂಡುತ್ತದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಬಹುದು.

8)ಒಂದೇ ಮೊಬೈಲ್‌ ಸಂಖ್ಯೆಯಿಂದ ಐವರ ಹೆಸರು ನೋಂದಾಯಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next