Advertisement
ಕಾಸರಗೋಡು ಜಿಲ್ಲೆಯ ಇಪ್ಪತ್ತು ಚಿತ್ರ ಕಲಾವಿದರು ಸಮಕಾಲೀನ ಸಂದರ್ಭಗಳನ್ನು ಕುಂಚದಲ್ಲಿ ನಿರೂಪಿಸಿದರು. ವರ್ತಮಾನದ ಅವ್ಯವಸ್ಥೆ, ತವಕ, ತಲ್ಲಣಗಳು, ಪ್ರಗತಿಪರ ಆಶಯಗಳು, ರಾಜಕೀಯ ಸಾಮಾಜಿಕ ವಿದ್ಯಮಾನಗಳು, ಜಾತಿ, ಮತ, ಧರ್ಮದ ಗೋಡೆಗಳನ್ನು ಕೆಡಹಿ ಐಕ್ಯತೆಯ ಸಂದೇಶ ಸಾರುವ ಭಾವ-ಅನುಭಾವದ ವರ್ಣಚಿತ್ರಗಳು ಕ ಕಲಾಕುಂಚದಲ್ಲಿ ಮೂಡಿ ಬಂದುವು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ನಡೆದ ಈ ಚಿತ್ರ ರಚನಾ ಪ್ರದರ್ಶನದಲ್ಲಿ ಅವರ ಪುತ್ರ ಪ್ರವೀಣ್ ಪುಣಿಂಚಿತ್ತಾಯ, ಜಯಪ್ರಕಾಶ್ ಶೆಟ್ಟಿ ಬೇಳ, ಇ.ವಿ. ಭಟ್ ಕಾಂಞಂಗಾಡ್, ಎಸ್.ಬಿ.ಕೋಳಾರಿ ಪೆರ್ಣೆ, ನೇಶನಲ್ ಅಬ್ದುಲ್ಲ, ಸುರೇಶ್ ಎಂ. ಮಹಾಲಸಾ, ಸತೀಶ್ ಪೆರ್ಲ, ರವಿ ಪಿಲಿಕೋಡ್, ಇ.ವಿ. ಅಶೋಕನ್, ರಘು ಮಲ್ಲ, ಪ್ರಭಾ ನೀಲೇಶ್ವರ, ಕೆ.ಎಚ್. ಮೊಹಮ್ಮದ್, ದಿನಕರ ಲಾಲ್ ಕೆ.ವಿ., ಕೆ.ವಿ. ರಾಜೇಶ್ ಪಿಲಿಕೋಡ್, ಪ್ರಿಯಾ ಕರುಣನ್, ಶೀಬಾ ಎಯ್ನಾಕೋಟ್, ಅರ್ಜುನ್ ಅರವಿಂದ್ ಮೊದಲಾದವರು ಬಹುವರ್ಣ ವೈವಿಧ್ಯದ ಚಿತ್ರ ರಚಿಸಿದರು. ಮಾರಾಟವಾದ ಚಿತ್ರಗಳಿಗೆ ಬಂದ ಮೊತ್ತವನ್ನು ಮುಖ್ಯ ಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಯಿತು.