Advertisement

Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್‌

10:18 AM May 06, 2024 | Team Udayavani |

ಹೊಸದಿಲ್ಲಿ: ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಹಾಗೂ ಗ್ಲೆನ್‌ ಮಾರ್ಕ್‌, ಉತ್ಪಾದನ ದೋಷದ ಕಾರಣ ದಿಂದಾಗಿ ಭಾರತದಲ್ಲಿ ತಯಾರಾದ ಔಷಧಗ ಳನ್ನು ಅಮೆರಿಕ ಮಾರುಕಟ್ಟೆಯಿಂದ ವಾಪಸ್‌ ಪಡೆದಿವೆ. ಈ ಬಗ್ಗೆ ಅಮೆರಿಕದ ಆರೋಗ್ಯ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ.

Advertisement

ಇದನ್ನೂ ಓದಿ:ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು

ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಗೆ ಬಳಸಲಾಗುವ ಇಪ್ರಟ್ರೋಪಿಯಂ ಬ್ರೋಮೈಡ್‌ ಹಾಗೂ ಆಲುºಟೆರಾಲ್‌ ಸಲ್ಪೇಟ್‌ ಎಂಬ ಔಷಧ ದ್ರಾವಣವು ಉತ್ಪಾದನೆ ವೇಳೆ ಸರಿಯಾದ ಪ್ರಮಾಣದಲ್ಲಿ ಭರ್ತಿಯಾಗಿರದ ಕಾರಣ 59,244 ಔಷಧ ಪ್ಯಾಕ್‌ ಗಳನ್ನು ಸಿಪ್ಲಾ ಹಿಂಪಡೆದಿದೆ. ಈ ಔಷಧವನ್ನು ಭಾರತದ ಇಂದೋರ್‌ ಘಟಕದಲ್ಲಿ ತಯಾರಿಸಲಾಗಿತ್ತು.

ಇದೇ ವೇಳೆ ಅಧಿಕ ರಕ್ತದೊತ್ತಡ(ಬಿ.ಪಿ.) ನಿಯಂತ್ರಣಕ್ಕೆ ಬಳಸಲಾಗುವ ಡಿಲ್ಟಿಯಾಜೆಂ ಹೈಡ್ರೋಕ್ಲೋರೈಡ್‌ ಔಷಧದಲ್ಲಿ ದೋಷ ಕಂಡು ಬಂದಿದ್ದು, ಈ ಔಷಧದ 3,264 ಪ್ಯಾಕ್‌ಗಳನ್ನು ಗ್ಲೆನ್‌ಮಾರ್ಕ್‌ ಫಾರ್ಮಾ ಸೆಟಿಕಲ್‌ ಸಂಸ್ಥೆ ಹಿಂಪಡೆದಿದೆ. ಜನರು ಈ ಔಷಧಗಳನ್ನು ಬಳಕೆ ಮಾಡಿದ ಪಕ್ಷದಲ್ಲಿ ಸಂಭವಿಸಬಹುದಾದ ಹಾನಿಗಳನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next