Advertisement

ಸಹಬಾಳ್ವೆ ನಿರ್ಮಾಣವೇ ನಿಜವಾದ ಧರ್ಮ

12:02 PM Jan 10, 2018 | Team Udayavani |

ಕೆಂಗೇರಿ: ಶಾಂತಿ ಸಂದೇಶ, ಭಾತೃತ್ವ ಹಾಗೂ ಸಹಬಾಳ್ವೆ ನಿರ್ಮಾಣ ಮಾಡುವುದೇ ನಿಜವಾದ ಧರ್ಮದ ಸಾರ ಎಂದು ಆರ್ಚ್‌ ಬಿಷಪ್‌ನ ಮಹಾಧರ್ಮಾಧ್ಯಕ್ಷ ಬರ್ನಾರ್ಡ್‌ ಮೊರಾಸ್‌ ಹೇಳಿದರು.

Advertisement

ಕುಂಬಳಗೋಡು ಗ್ರಾಪಂ ವ್ಯಾಪ್ತಿಯ ಅಂಚೆಪಾಳ್ಯ ಸಮೀಪ ನೂತನವಾಗಿ ಸಂತ ಬೆನಡಿಕ್ಟ್ ದೇವಾಲಯ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಒತ್ತಡ ಜೀವನ ಶೈಲಿಯ ಪರಿಣಾಮ ಮಾನಸಿಕವಾಗಿ ಕುಗ್ಗಿರುವ ಮನಸ್ಸುಗಳಿಗೆ ಒಂದಷ್ಟು ಶಾಂತಿ ಸಂತೋಷ ದೊರಕಲು ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಹಕಾರಿಯಾಗುತ್ತವೆ ಎಂದರು.

ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ವೈವಿಧ್ಯಮಯ ಬಹು ಸಂಸ್ಕೃತಿ ಹೊಂದಿರುವ ದೇಶದಲ್ಲಿ ಎಲ್ಲಾ ಜಾತಿ, ವರ್ಗ, ಧರ್ಮಗಳು ಸಮಾನತೆ ಸಾರುವ ಉತ್ತಮ ಸಂದೇಶಗಳನ್ನು ಪಾಲಿಸುವ ಪರಿಣಾಮ ದೇಶದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಭಾತೃತ್ವ, ಸ್ನೇಹ, ವಿಶ್ವಾಸದಿಂದ ಬಾಳುವ ವಾತಾವರಣ ನಿರ್ಮಾಣವಾಗಿರುವುದು ದೇಶದ ಪ್ರಜಾಸತಾತ್ಮಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹೆಚ್ಚಿನ ಮನ್ನಣೆ ದೊರೆತು ದೇಶದ ಏಕತೆ ಹಾಗೂ ಐಕ್ಯತೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.

ತಾಪಂ ಸದಸ್ಯ ಅಲ್ಲಾ ಬಕಾಷ್‌, ಕುಂಬಳಗೋಡು ಗ್ರಾಪಂ ಅಧ್ಯಕ್ಷ ಚಿಕ್ಕರಾಜು, ಯಶವಂತಪುರ ವಿಧಾನಸಭಾ ಕ್ಷೇತ್ರ ಆರಾಧನಾ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಬೆಂಗಳೂರು ದಕ್ಷಿಣ ತಾಲೂಕು ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಫಾದರ್‌ಗಳಾದ ಜೆರೋಮ್‌, ಪೀಟರ್‌, ಗ್ರಾಪಂ ಸದಸ್ಯರಾದ ಇಲಿಯಾಸ್‌, ರಾಮಣ್ಣ, ಅನೀಸ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next