ಬೆಂಗಳೂರು: ಬೇಷರತ್ ಆಗಿ ಜೆಡಿಎಸ್ ಸೇರುತ್ತೇನೆ ಎಂದಿದ್ದ ಸಿ.ಎಂ.ಇಬ್ರಾಹಿಂ ಈಗ ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಚಾರ ಜೆಡಿಎಸ್ ನಾಯಕರಿಗೆ ಕಸಿವಿಸಿ ಸೃಷ್ಟಿಸಿದೆ.
ಬದಲಾದ ಸನ್ನಿವೇಶದಲ್ಲಿ ಪರಿಷತ್ ಸ್ಥಾನಕ್ಕೆ ಒತ್ತಡ ಹಾಕುತ್ತಿರುವ ಇಬ್ರಾಹಿಂ, ನನಗೆ ಅವಕಾಶ ನೀಡಿದರೆ ಮುಸ್ಲಿಂ ಸಮುದಾಯಕ್ಕೆ ಒಳ್ಳೆಯ ಸಂದೇಶ ಕೊಟ್ಟಂತಾಗಲಿದೆ ಎಂಬ ದಾಳ ಉರುಳಿಸಿದ್ದಾರೆ. ಇಲ್ಲದೇ ಹೋದರೆ ಇಡೀ ಸಮುದಾಯ ಅನುಮಾನದಿಂದಲೇ ನೋಡುವಂತಾಗಲಿದೆ. ನನಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಅವಕಾಶ ನೀಡಿ ಎಂದು ಇಬ್ರಾಹಿಂ ಒತ್ತಡ ಹೇರಲಾರಂಭಿಸಿದ್ದಾರೆ.
ಆದರೆ, ಇಬ್ರಾಹಿಂ ಒತ್ತಡದಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ದೇವೇಗೌಡರ ಕುಟುಂಬ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ನಾಳೆ ಈ ಬಗ್ಗೆ ಸಭೆ ಸೇರಿ ತೀರ್ಮಾನಿಸಲಿರುವ ದೇವೇಗೌಡ, ಕುಮಾರಸ್ವಾಮಿಯವರು ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ನೇಮಕ
ಈಗಾಗಲೇ ಟಿ.ಎ ಶರವಣ, ಕುಪೇಂದ್ರ ರೆಡ್ಡಿಯಿಂದಲೂ ಪರಿಷತ್ ಸ್ಥಾನಕ್ಕೆ ತೆರೆಮರೆ ಪೈಪೋಟಿ ಪ್ರಾರಂಭವಾಗಿದೆ. ನಾರಾಯಣ ಸ್ವಾಮಿಯಿಂದಲೂ ವರಿಷ್ಠರ ಮೇಲೆ ಒತ್ತಡವಿದೆ.