ಬೆಂಗಳೂರು: ಸರ್ಕಾರದ ಕಾರ್ಯವೈಖರಿ ಬಗ್ಗೆ ಅಮಿತ್ ಶಾ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿಎಂ ಬದಲಾವಣೆ ಊಹಾಪೋಹ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಸರಣಿ ಕೊಲೆಗಳ ಬಗ್ಗೆ ಅಮಿತ್ ಶಾ ಅವರಿಗೆ ಮಾಹಿತಿ ಇದೆ ಎಂದು ಹೇಳಿದರು.
ನಾನು ಪ್ರಮಾಣ ವಚನ ಸ್ವೀಕರಿಸಿ ಒಂದು ವರ್ಷವಾಗಿದೆ. ಗೃಹ ಇಲಾಖೆಯನ್ನು ಚೆನ್ನಾಗಿ ನಿರ್ವಹಿಸಿದ್ಧೇನೆ ಎಂಬ ತೃಪ್ತಿ ಇದೆ. ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಕೆಲ ಅಭ್ಯರ್ಥಿಗಳ ಭೇಟಿ ಮಾಡಿದ್ದಾರೆ. ಸಿಐಡಿ ವರದಿ ಕೊಟ್ಟ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಎರಡೂ ಪ್ರಕರಣದಲ್ಲಿ ಯಾರು ಇದ್ದಾರೆ ಅಂತ ಗೊತ್ತಾಗಿದೆ. ಪ್ರಮುಖ ಆರೋಪಿಗಳು ಯಾರು ಎಂಬುದು ತಿಳಿದಿದೆ. ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇನೆ. ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣದ ಮಾಹಿತಿ ಪಡೆದರು. ಎಲ್ಲವನ್ನೂ ಹೇಳಲಿಕ್ಕೆ ಆಗುವುದಿಲ್ಲ. ಸರ್ಕಾರದ ಕಾರ್ಯವೈಖರಿಗೆ ಬಗ್ಗೆ ಅಮಿತ್ ಶಾ ಗೆ ತೃಪ್ತಿತಿದೆ. ಸಿಎಂ ಬದಲಾವಣೆ ಊಹಾಪೋಹ ಅಷ್ಟೇ ಎಂದರು.
ಇದನ್ನೂ ಓದಿ:ನಾವು ಹೆದರುವುದಿಲ್ಲ…ಹೋರಾಟ ಮುಂದುವರಿಯಲಿದೆ: ಇ.ಡಿ ವಿರುದ್ಧ ರಾಹುಲ್ ಗಾಂಧಿ
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವರ ಗಮನಕ್ಕೆ ಬಂದಿದೆ.ಅಮಿತ್ ಶಾ ಬಳಿ ಕರಾವಳಿ ಸರಣಿ ಹತ್ಯೆ ಬಗ್ಗೆ ಚರ್ಚೆಯಾಗಿದೆ. ನಮ್ಮಿಂದ ಹತ್ಯೆ, ತನಿಖೆ ಕುರಿತಂತೆ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದರು.