Advertisement

ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ –ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

04:39 PM Feb 24, 2021 | Team Udayavani |

ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಲು ಕ್ರಮ ತೆಗೆದುಕೊಳ್ಳಿ, ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ, ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

Advertisement

ಬುಧವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ಆಯೋಜನೆಗೊಂಡಿದ್ದ ಎಲ್ಲಾ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ /ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳ ಮತ್ತು ರೈತರ ಸಹಕಾರ ಬಹಳ ಮುಖ್ಯ , ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣ್ಯ ಅಧಿಕಾರಿಗಳ ಕರ್ತವ್ಯ ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು. ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ಶೇಕಡ 22.8 ರಷ್ಟಿದೆ. ಅದನ್ನು ಶೇಕಡಾ 33 ರಷ್ಟು ಹೆಚ್ಚಿಸಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಅವರು ತಿಳಿಸಿದರು.

ಬೇಸಿಗೆ ಸಮೀಪಿಸುತ್ತಿದೆ, ಕಾಡ್ಗಿಚ್ಚು ಹಬ್ಬಬಹುದು, ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ, ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಗೆ ಮುಖಭಂಗ; ಸೂರತ್ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜಯಭೇರಿ!

Advertisement

ಕಾರ್ಯಾಗಾರದಲ್ಲಿ ಮಾತನಾಡಿದ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು, ಗಣಿಗಾರಿಕೆಯಿಂದ ಪ್ರಾಣಿಗಳ ಆಹಾರ ಪದ್ಧತಿ ಬದಲಾಗಿದೆ, ಹಾಗೂ ಆ ಶಬ್ದಗಳಿಂದ ಹೆದರಿ ಅವು ಸಮೀಪ ಇರುವ ನಗರ ಪಟ್ಟಣ ಪ್ರದೇಶಗಳಿಗೆ ನುಗ್ಗುತ್ತಿದೆ ಇದರಿಂದ, ಅನೇಕ ರೀತಿಯ ಆಪತ್ತುಗಳು ಉಂಟಾಗುತ್ತಿವೆ ಎಂದು ಅವರು ಹೇಳಿದರು.

ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಾಡು ಪ್ರಾಣಿಗಳಿಂದ ಮನುಷ್ಯರು ಸಾವಿಗೀಡಾದಾಗ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚು ಮಾಡಬೇಕು, ದೊಡ್ಡ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳು ಸತ್ತಾಗ ನಾವು 5000 ಮತ್ತು ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದ್ದೇವೆ, ಇದನ್ನು ಹೆಚ್ಚಳ ಮಾಡಬೇಕಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಇನ್ನು ನರೇಂದ್ರ ಮೋದಿ ಸ್ಟೇಡಿಯಂ

ಮುಖ್ಯವಾಗಿ ಕೆಳಹಂತದ ಅರಣ್ಯ ಇಲಾಖೆಯ ನೌಕರರು ಅರಣ್ಯ ಸಂರಕ್ಷಣೆಗೆ ವಾಹನ ಬಳಸಬೇಕಾದದ್ದು ಅನಿವಾರ್ಯ . ಆದರೆ ನಾವು ಅವರಿಗೆ ವಾಹನ ಒದಗಿಸಿಲ್ಲ, ಅವರದ್ದೇ ಸ್ವಂತ ದ್ವಿಚಕ್ರವಾಹನ ಬಳಸುತ್ತಿದ್ದಾರೆ ,ನಾವು ಕನಿಷ್ಠ  ಇಂಧನ ಭತ್ಯೆಯನ್ನದರೂ ಕೊಡಬೇಕಿದೆ ಎಂದು ಅವರು ತಿಳಿಸಿದರು.

ಕಾಡು ಪ್ರಾಣಿಗಳು ನಗರಕ್ಕೆ ನುಗ್ಗದಂತೆ ವಿಶೇಷವಾಗಿ ಕಾಡಾನೆಗಳು ಬರದಹಾಗೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅನುಮತಿ ಕೋರಿ ಸದ್ಯದಲ್ಲೇ ಸರ್ಕಾರಕ್ಕೆ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next