Advertisement
ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ಬುಧವಾರ ಉದ್ಘಾಟಸಿ ಮಾತನಾಡಿದ ಅವರು,ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸರು ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. ಪೊಲೀಸ್ ಇಲಾಖೆ ಜನರ ಸಹಕಾರದಿಂದ ಶಾಂತಿ ಸುವ್ಯವಸ್ಥಿತ ಕಾಪಾಡಬೇಕು. ಪೊಲೀಸರಿಗೆ ಗಡಿ ಭಾಗದ ಸವಾಲುಗಳು ಭಿನ್ನವಾಗಿವೆ ಎಂದರು.
Related Articles
Advertisement
ಇದನ್ನೂ ಓದಿ:ಧೋನಿ ಮಗಳಿಗೆ ವಿಶೇಷ ಗಿಫ್ಟ್ ನೀಡಿದ ವಿಶ್ವಕಪ್ ಹೀರೋ ಲಿಯೋನೆಲ್ ಮೆಸ್ಸಿ
ನಾನು ಗೃಹ ಮಂತ್ರಿಯಾಗಿದ್ದಾಗ ಆರಂಭವಾಗಿದ್ದ ಕಟ್ಟಡಗಳು ಒಂದು ವರ್ಷದಲ್ಲಿ ಪೂರ್ಣಗೊಂಡಿವೆ. ಇವುಗಳನ್ನು ಮುಖ್ಯಮಂತ್ರಿಯಾದ ಬಳಿಕ ಉದ್ಘಾಟಿಸಿದ್ದೇನೆ. ನಿಗಮದ ವತಿಯಿಂದ ರಾಜ್ಯದಲ್ಲಿ ಎರಡು ಬಂಧಿಖಾನೆಗಳನ್ನು ನಿರ್ಮಾಣ ಮಾಡಲಾಗುವುದು. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದ್ದು. ಅಗತ್ಯ ತಜ್ಞರ ನೇಮಕಾತಿ ಮಾಡಲಾಗಿದೆ. ಹಿಂದೆ ವಿದಿ ವಿಜ್ಞಾನ ವರದಿಗಳು ಕೈಸೇರಲು ಮೂರು ತಿಂಗಳು ಹಿಡಿಯುತ್ತಿತ್ತು. ಸದ್ಯ 30 ದಿನಗಳ ವರದಿಗಳನ್ನು ನೀಡಲಾಗುತ್ತಿದೆ. 15 ದಿನದಲ್ಲಿ ವಿದಿ ವಿಜ್ಞಾನ ವರದಿ ನೀಡಲು ಕ್ರಮ ವಹಿಸುವುದಾಗಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಪೊಲೀಸರು ಗಡಿ ವಿಚಾರದಂತಹ ಭಾವನಾತ್ಮಕ ವಿಚಾರಗಳಲ್ಲಿ ಸಹನೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಪೊಲೀಸ್ ಇಲಾಖೆ ಗೃಹ ನಿರ್ಮಾಣದ ಜೊತೆಗೆ ನೂತನ ಪೊಲೀಸ್ ಠಾಣೆ, ಎಫ್‌ಎಸ್‌ಎಲ್ ಲ್ಯಾಬ್ ನಿರ್ಮಾಣ, ವಾಹನ ಹಾಗೂ ನೂತನ ಶಸ್ತ್ರಾಸ್ತ್ರ ಖರೀದಿಸಲು ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಎಸ್. ಬೆನಕೆ ಬೆಳಗಾವಿ ಪೊಲೀಸರ ಬಗ್ಗೆ ಅಪಾರ ಪ್ರೀತಿಯಿದೆ. ಕೊರನಾ ಕಾಲದಲ್ಲಿ ಪೊಲೀಸರು ಕೊರೋನಾ ಎದುರಿಸಿಯೂ ಜನರ ಸೇವೆ ಮಾಡಿದ್ದಾರೆ. ಬೆಳಗಾವಿ ನಗರದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ ಎಂದರು. ಬ್ರಿಟಿಷ್ ಕಾಲೋನಿಯಲ್ಲಿ ಪೊಲೀಸರಿಗೆ ಗೃಹಗಳನ್ನು ನಿರ್ಮಿಸಬೇಕು. ಬಂದೊಬಸ್ತ್ ಆಗಮಿಸುವ ಪೊಲೀಸರಿಗೆ ನಗರದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ, ಸಂಸದೆ ಮಂಗಲ ಸುರೇಶ ಅಂಗಡಿ ಶಾಸಕ ಮಹೇಶ ಕುಮಠಳ್ಳಿ, ಒಳಾಡಳಿತ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮ ವ್ಯವಸ್ಥಾಪಕ ನಿರ್ದೇಶಕರು ಅರುಣ ಜೆ. ಚಕ್ರವರ್ತಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ. ಜಿ. ಹಿರೇಮಠ, ಉತ್ತರ ಬೆಳಗಾವಿ ಆರಕ್ಷಕ ಮಹಾನಿರೀಕ್ಷಕ ಎನ್. ಸತೀಶ್ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ. ಪಾಟೀಲ್ ಉಪಸ್ಥಿತರಿದ್ದರು.