ಹುಬ್ಬಳ್ಳಿ: ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರಿಗೆ ರಾಜ್ಯದ ಬಗ್ಗೆ ಏನು ಗೊತ್ತಿದೆ. ಮೊದಲು ಅವರ ಪಕ್ಷದ ಒಳ ಜಗಳ ಬಗೆಹರಿಸಿಕೊಳ್ಳಲಿ. ಆ ಪಕ್ಷದಲ್ಲಿನ ಭ್ರಷ್ಟಾಸುರರು ಸಾಕಷ್ಟು ಜನ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಡಾಸುರರ ದೊಡ್ಡ ಪಟ್ಟಿಯೇ ಇದೆ. ಇಂತಹ ಬೇಜವಬ್ದಾರಿ ಮಾತುಗಳಿಂದ ಏನು ಸಾಧಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಘೋಷಣೆ ಮಾಡುತ್ತಿರುವ ಕೆಲ ಯೋಜನೆಗಳು ನಮ್ಮಿಂದ ನಕಲು ಮಾಡಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದೇವೆ. ಗೃಹಿಣಿ ಶಕ್ತಿ ಕೊಡುವುದಾಗಿ ಹೇಳಿದ ಮೇಲೆ ಇವರು ಗೃಹಲಕ್ಷ್ಮಿ ಮಾಡಿದರು. ಅವರ ಯೋಜನೆ ಗೂ ನಮ್ಮಗೂ ಬಹಳ ವ್ಯತ್ಯಾಸ ಇದೆ. ಕಾಂಗ್ರೆಸ್ ನವರು ಚುನಾವಣೆ ಆಕಾಶ ತೊರಿಸುತ್ತಿದ್ದಾರೆ, ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಾರೆ ಎಂದರು.
ಇದನ್ನೂ ಓದಿ: ನಾವು ದಿವಾಳಿ ದೇಶದಲ್ಲಿ ವಾಸಿಸುತ್ತಿದ್ದೇವೆ: ಪಾಕ್ ರಕ್ಷಣಾ ಸಚಿವ
ಮಹದಾಯಿ ಯೋಜನೆಗೆ ಸಂಬಂಧಿಸಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಮಗಾರಿ ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ ಅನುಷ್ಠಾನಗೊಳಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಳೆದ ಬಾರಿ ಬಜೆಟ್ ಅನುಷ್ಠಾನ ಕ್ಕೆ ಸಮಿತಿ ಮಾಡಲಾಗಿತ್ತು. ಕಳೆದ ಬಜೆಟ್ ಶೇಕಡಾ ೯೦ ರಷ್ಟು ಈಡೇರಿಸಿದ್ದೇವೆ. ಈ ಬಾರಿಯೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.