Advertisement

ಭಾಷಣವಷ್ಟೇ ಕಾಂಗ್ರೆಸ್‌ ಸಾಧನೆ: ಸಿಎಂ

11:10 PM Oct 13, 2022 | Team Udayavani |

ಹೂವಿನಹಡಗಲಿ: ರಾಜ್ಯದ ಜನತೆಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಕೆಲಸಗಳು ನಿರಂತರವಾಗಿ ನಡೆಯಬೇಕು. ಹಾಗಿದ್ದಲ್ಲಿ ಮಾತ್ರ ರಾಜ್ಯ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿ ಹೆಚ್ಚಬೇಕು. ಅದರಂತೆ ರಾಜ್ಯದ ಎಸ್‌ಸಿ ಹಾಗೂ ಎಸ್‌ಟಿ ಜನಾಂಗದ  ಮೀಸಲಾತಿ ಹೆಚ್ಚಿಸಲಾಗಿದೆ. ಇದನ್ನು ಕಾಂಗ್ರೆಸ್‌ನವರು ತಮ್ಮ ಅವಧಿಯಲ್ಲೇ ಯಾಕೆ ಮಾಡಲಿಲ್ಲ? ಕೇವಲ ಎಸ್‌ಸಿ, ಎಸ್‌ಟಿ ಜನಾಂಗ ಕುರಿತು ಭಾಷಣ ಮಾಡುತ್ತಲೇ ಬಂದರು. ಭಾಷಣದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎನ್ನುವುದನ್ನು ಅರಿಯಬೇಕು ಎಂದರು.

ಕಾಂಗ್ರೆಸ್‌ನಿಂದ ಲೂಟಿ :

ಮಾಜಿ ಸಿಎಂ ಬಿ.ಎಸ್‌. ಯಡಿ ಯೂರಪ್ಪ ಮಾತನಾಡಿ,  ಕೇಂದ್ರ ಹಾಗೂ ರಾಜ್ಯ ಸರಕಾರಗಳ   ಚುನಾ ವಣೆ ಸರ್ವೇ ಪ್ರಕಾರ ಮತ್ತೂಮ್ಮೆ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಲಿದ್ದು, 150 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ ಮುಖಂಡ ರಮೇಶಕುಮಾರ್‌ ಹೇಳಿದಂತೆ, ಕಾಂಗ್ರೆಸ್‌ ಪಕ್ಷದವರು 3-4 ತಲೆಮಾರಿನಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಿದರು.

ಸಚಿವರಾದ ಗೋವಿಂದ ಕಾರಜೋಳ ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ, ಆನಂದ್‌ ಸಿಂಗ್‌, ಸಂಸದ ವೈ. ದೇವೇಂದ್ರಪ್ಪ, ಶಾಸಕ ಕರುಣಾಕರ ರೆಡ್ಡಿ ಸಹಿತ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Advertisement

ಕುಣಿದು ಕುಪ್ಪಳಿಸಿದರೂ ಸಿದ್ದುವಿಗೆ  ಅಧಿಕಾರ ಸಿಗದು: ಯಡಿಯೂರಪ್ಪ :

ಭಾರತ್‌ ಜೋಡೋ ಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರೂ  ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಮತ್ತೂಂದು ಬಾರಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಹಾಲಸ್ವಾಮಿ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು,  ಬಿಜೆಪಿಯಲ್ಲಿ ಒಡಕು ಮೂಡಿಸಲು ಕಾಂಗ್ರೆಸ್‌ನವರು ಏನೇನೋ ಹೇಳುತ್ತಿದ್ದಾರೆ. ಅದಕ್ಕೆಲ್ಲ ನಾವು ಪ್ರತಿಕ್ರಿ ಯಿಸುವುದಿಲ್ಲ ಎಂದರು. ಶ್ರೀಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರು ಆಶೀರ್ವಾದ ಪಡೆದುಕೊಂಡರು. ಅನಂತರ ದಲಿತ ಮಹಿಳೆ ನವಲಿ ಹನುಂತವ್ವರ ಮನೆಯಲ್ಲಿ  ಉಪಾಹಾರ ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next