Advertisement

ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

01:02 PM Aug 14, 2022 | Team Udayavani |

ಬೆಂಗಳೂರು: ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ಅಂಗವಾಗಿ ಹೊರತರಲಾದ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಉದಯವಾಣಿ ಜನಪರ ಕಾಳಜಿ, ಸುದ್ದಿ ನಿಖರತೆ ಬಗ್ಗೆ ಮುಖ್ಯಮಂತ್ರಿ ಅವರು ಮೆಚ್ಚುಗೆ ಸೂಚಿಸಿ ಪತ್ರಿಕೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಓದುಗರ ಪ್ರೀತಿ ಗಳಿಸಲಿ ಎಂದು ಹಾರೈಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ಉದಯವಾಣಿ ಸಂಪಾದಕರಾದ ವೆಂಕಟೇಶ್ ಪ್ರಭು, ಉಪ ಮುಖ್ಯವರದಿಗಾರ ಲಕ್ಷ್ಮೀನಾರಾಯಣ, ವಿಶೇಷ ವರದಿಗಾರ ಶಂಕರ ಪಾಗೋಜಿ, ಹಿರಿಯ ಜಾಹೀರಾತು ವ್ಯವಸ್ಥಾಪಕರಾದ ಟಿ. ರವಿಕುಮಾರ್ ಹಾಗೂ ಬಿ.ಕೆ ಕೃಷ್ಣಪ್ಪ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next