Advertisement

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಸಂಕಲ್ಪ

01:53 PM Jul 06, 2022 | Team Udayavani |

ಬೆಂಗಳೂರು: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರು ಸಭೆ ನಡೆಸಿದ್ದಾರೆ.

Advertisement

ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನಕ್ಕೆ ಸೇರಿದ ಅಂದಾಜು 26 ಕೋಟಿ ರೂ ಹಣದಲ್ಲಿ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು,ಸವದತ್ತಿ ಶಾಸಕ ಆನಂದ್ ಮಾಮನಿ,ದೇವಸ್ಥಾನದ ಆಡಳಿತ ಮಂಡಳಿ ಜೊತೆ ಸಿಎಂ ಸಭೆ ನಡೆಸಿ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ದಪಡಿಸುವಂತೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಕೆಲ ಸಲಹೆ ಸೂಚನೆ ನೀಡಿರುವ ಸಿಎಂ, ದೇವಸ್ಥಾನದಲ್ಲಿ ವಸತಿ‌ ನಿರ್ಮಾಣಕ್ಕೆ ಸೂಚನೆ ನೀಡಿದ್ದು, ವಾಸ್ತವ್ಯಕ್ಕೆ 400 ಕೊಠಡಿಗಳಿದ್ದು,ಇನ್ನೂ 200 ಕೊಠಡಿ ಹೆಚ್ಚಿಸುವಂತೆ ಸೂಚಿಸಿದ್ದಾರೆ. ವಸತಿ ಸಮುದಾಯದಗಳ ಕೆಳಗೆ ಅನ್ನದಾಸೋಹ ಕೇಂದ್ರ ತೆರೆಯಲು,
1,20,000 ಸ್ಕ್ವೇರ್ ಫೀಟ್‌ನಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ, ಸ್ನಾನಗೃಹ,ಶೌಚ ಗೃಹ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ.

ದೇವಸ್ಥಾನದಲ್ಲಿ 2 ಪ್ರತ್ಯೇಕ ಸರತಿ ಸಾಲು ( Q line ) ನಿರ್ಮಾಣ,ಒಂದು ವಿಶೇಷ ದರ್ಶನಕ್ಕೆ ಸರತಿ ಸಾಲಿಗೆ ಅವಕಾಶ ನೀಡುವಂತೆ ಸೂಚನೆ, ದೇವಸ್ಥಾನದ ಸುತ್ತಲಿನ 3 ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಫುಟ್‌ಪಾತ್ ಅಭಿವೃದ್ಧಿ, ವ್ಯಾಪಾರಸ್ಥರಿಗೆ ಪ್ರತ್ಯೇಕ ಅಂಗಡಿ ಮುಂಗಟ್ಟುಗಳಿಗೆ ಸ್ಥಳಾವಕಾಶ, ದೇವಸ್ಥಾನದ ಸ್ವಚ್ಚತೆಗೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕಕ್ಕೆ ಸೂಚನೆ ನೀಡಿದ್ದಾರೆ.

ಸವದತ್ತಿ ಶಾಸಕ ಆನಂದ್ ಮಾಮನಿ ನೇತೃತ್ವದಲ್ಲಿ ಜುಲೈ 20 ರಂದು ಮತ್ತೊಂದು ಸಭೆ ನಡೆಸಿ ಸಿಎಂಗೆ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next