Advertisement
– ಹೀಗೆಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ಅಜಯ್ ಮಕೇನ್ ಲಿಖಿತ ವರದಿ ಕೊಟ್ಟಿದ್ದಾರೆ.
Related Articles
Advertisement
ಗೆಹ್ಲೋಟ್ ಜತೆ ಚರ್ಚೆ:ಶಾಸಕ ಸಚಿನ್ ಪೈಲಟ್‌ಗೆ ಸಿಎಂ ಹುದ್ದೆ ನೀಡಲೇಬಾರದು ಎಂದು ಪಟ್ಟುಹಿಡಿದಿರುವ ಅಶೋಕ್ ಗೆಹ್ಲೋಟ್ ಜತೆಗೆ ಮಾಜಿ ಸಚಿವರಾದ ಅಂಬಿಕಾ ಸೋನಿ, ಆನಂದ ಶರ್ಮಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ ಅ.17ರ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗೆಹ್ಲೋಟ್ ಸ್ಪರ್ಧಿಸುವ ಸಾಧ್ಯತೆಯೇ ಅಧಿಕವಾಗಿದೆ. ಕಣಕ್ಕೆ ಬನ್ಸಲ್?:
ಮತ್ತೊಂದು ಬೆಳವಣಿಗೆಯಲ್ಲಿ ಕೇಂದ್ರದ ಮಾಜಿ ಸಚಿವ ಪವನ್ ಕುಮಾರ್ ಬನ್ಸಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಇವೆ. ಬಿಕ್ಕಟ್ಟಿನ ನಡುವೆಯೂ ಸಿಎಂ ಅಶೋಕ್ ಗೆಹ್ಲೋಟ್ ಅವರು ಜೈಪುರದಲ್ಲಿ ತಮಗೆ ನಿಷ್ಠರಾಗಿರುವ ಶಾಸಕರು ಮತ್ತು ಸಚಿವರ ಜತೆಗೆ ಸಭೆ ನಡೆಸಿದ್ದಾರೆ. ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಬೇಡ ಎಂದು ನಾನು ವರಿಷ್ಠರಿಗೆ ಹೇಳಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸುಳ್ಳು.
-ಸಚಿನ್ ಪೈಲಟ್, ಕಾಂಗ್ರೆಸ್ ಶಾಸಕ