Advertisement
ಬೃಹತ್ ಗಾತ್ರದ ಹೊಂಡ ಸೃಷ್ಟಿಯಾಗಿ ಹಲವು ಅಪಘಾತಗಳು ಇಲ್ಲಿ ಸಂಭವಿಸಿವೆ. ದುರಸ್ತಿಗೆ ಆಗ್ರಹಿಸಿ ಕೆಆರ್‌ಡಿಸಿಎಲ್ ಸಹಿತ ವಿವಿಧ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೊಂಡದಬಗ್ಗೆ ಅರಿವಿಲ್ಲದೆ ಮೇಲಿಂದ ಮೇಲೆ ಅವಘಡಗಳು ಇಲ್ಲಿ ಸಂಭವಿಸಿವೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿಯೇ ಸಂಚರಿಸಿದರೂ ಗಮನಿಸದಿರುವುದನ್ನು ಕಂಡು ಪೈಚಾರು ಅಸ್ತ್ರ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಕ್ಲಬ್ ನ ಸದಸ್ಯರು ಶುಕ್ರವಾರ ತಾವೇ ದುರಸ್ತಿಗೆ ಮುಂದಾದರು. ಸ್ವತಃ ಹಣ ಖರ್ಚು ಮಾಡಿ, ಜಲ್ಲಿ, ಮರಳು ತಂದು ಕಾಮಗಾರಿ ನಡೆಸಿದರು. ಕ್ಲಬ್‌ನ ರಫೀಕ್ ಬಿ.ಎಸ್., ಬಶೀರ್ ಆರ್.ಬಿ., ಲತೀಫ್ ಬಿ.ಎಲ್., ಶರೀಫ್ ಪಿ.ಎ., ಬಾತಿಷಾ, ನಾಸಿರ್ ಕೆ.ಎಚ್., ಅಬ್ಟಾಸ್ ಶಾಂತಿನಗರ, ಲತೀಫ್ ಬಿ.ಎ., ಸಿರಾಜ್ ಎಸ್.ಪಿ. ಹಾಗೂ ತಂಡ ಈ ಕೆಲಸ ನಿರ್ವಹಿಸಿ, ದುರಸ್ತಿಗೆ ಕ್ರಮ ಕೈಗೊಳ್ಳದ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಲಬ್‌ನ ಕಾರ್ಯವನ್ನು ವಾಹನ ಸವಾರರು ಶ್ಲಾಘಿಸಿದರು.
Related Articles
ದುರಸ್ತಿ ವೇಳೆ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ನೇತು ಹಾಕಲಾದ ಬ್ಯಾನರ್ ಗಮನ ಸೆಳೆಯಿತು. ‘ತೆರಿಗೆ ಕಟ್ಟಿದ ವಾಹನ ಚಾಲಕರ ಶಾಪ ಜನಪ್ರತಿನಿಧಿಗಳಿಗೆ ತಟ್ಟದಿರಲೆಂದು ಈ ಸೇವೆ’ ಎಂಬ ಸಾಲು ನಿರ್ಲಕ್ಷ್ಯದ ವಿರುದ್ಧ ಆಕ್ರೋಶದ ಧ್ವನಿಯಾಗಿ ಗಮನ ಸೆಳೆದಿದೆ.
Advertisement