Advertisement
ಕೆಲವು ಮಕ್ಕಳು, ಮೂರು ವರ್ಷ ತುಂಬಿದ ನಂತರವೂ ಸ್ಪಷ್ಟವಾಗಿ ಮಾತಾಡುವುದಿಲ್ಲ. (ಕೆಲವು ಮಕ್ಕಳು ಮಾತೇ ಆಡುವುದಿಲ್ಲ). ಅವು ಏನನ್ನೋ ಹೇಳುತ್ತಿರುತ್ತವೆ. ಅದೇನು ಎಂದು ಯಾರಿಗೂ ಅರ್ಥವಾಗುವುದಿಲ್ಲ. ಮಗುವಿಗೆ ತೊದಲು ಸಮಸ್ಯೆಯಿದೆ ಎಂಬ ಫೀಲ್ ಹೆತ್ತವರಿಗೆ ಗೊತ್ತಾಗುವುದೇ ಆಗ. ಇದೂ ಗುಣಪಡಿಸಬಹುದಾದ ಒಂದು ಆರೋಗ್ಯ ಸಂಬಂಧಿ ಸಮಸ್ಯೆ. ಹಾಗಾಗಿ, ಗಾಬರಿಯಾಗುವ ಅಗತ್ಯವಿಲ್ಲ. ತೊದಲಿದ, ಉಗ್ಗುವ ಅಥವಾ ಮಾತಾಡಲು ಬಾರದವರಿಗೆ ಚಿಕಿತ್ಸೆ ನೀಡುವವರೇ ಸ್ಪೀಚ್ ಥೆರಪಿಸ್ಟ್‌ಗಳು.
Related Articles
ಸ್ಪೀಚ್ ಥೆರಪಿಸ್ಟ್‌ಗಳಾಗಲು ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಪಿ.ಸಿ.ಎಂ.ಬಿ ಅಭ್ಯಾಸ ಮಾಡಬೇಕು. ನಂತರ ಆಲ್ ಇಂಡಿಯಾ ಟೆಸ್ಟ್ ಅಥವಾ ಮೆರಿಟ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪದವಿ (ಬಿಎ ಎಸ್‌ಎಲ್‌ಪಿ) ಸ್ನಾತಕೋತ್ತರ ಪದವಿ (ಎಂಎ ಎಸ್‌ಎಲ್‌ಪಿ/ ಎಂಎಸ್ಸಿ ಆಡಿಯೋಲಜಿ)ಯಲ್ಲಿ ಸ್ಪೀಚ್ ಥೆರಪಿ ಅಧ್ಯಯನ ನಡೆಸಬೇಕು, ಆನಂತರ ಸ್ಪೀಚ್ ಥೆರಪಿಸ್ಟ್ ಆಗಬಹುದು.
Advertisement
ಕೌಶಲ್ಯಗಳೂ ತಿಳಿದಿರಲಿ…– ಧ್ವನಿ ಸಮಸ್ಯೆ, ಕ್ಲಿಷ್ಟ ಪದೋಚ್ಚಾರಣೆ ಸಮಸ್ಯೆ, ನಾಲಗೆಗೆ ಕಸರತ್ತು ನೀಡುವ ವ್ಯಾಯಾಮಗಳ ಬಗ್ಗೆ ಅರಿವು
– ಧ್ವನಿಪೆಟ್ಟಿಗೆ ತೊಂದರೆಗೆ ಚಿಕಿತ್ಸೆ ನೀಡುವ ಪ್ರಾವೀಣ್ಯತೆ
– ಥೈರಾಯ್ಡ, ಗಂಟಲು ಬೇನೆ ಸಂಬಂಧಿತ ರೋಗಗಳ ಬಗ್ಗೆ ತಿಳಿವಳಿಕೆ
– ಭಾಷೆಗಳ ಬಗ್ಗೆ ಜ್ಞಾನ, ರೆಕಾರ್ಡ್ ನಿರ್ವಹಣೆ
– ಉತ್ತಮ ಸಂವಹನಾ ಕೌಶಲ್ಯ
– ಸಮೂಹದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ, ಸಹನೆ ಅತ್ಯಗತ್ಯ ಅವಕಾಶಗಳು ಎಲ್ಲೆಲ್ಲಿ?
ಆಡಿಯೋಲಜಿ ವಿಭಾಗ, ಸ್ಪೀಚ್ ಕ್ಲಿನಿಕ್, ರಿಹೆಬಿಲಿಟೇಷನ್ ಸೆಂಟರ್‌ಗಳು, ಸ್ಪೀಚಿಸ್ಟ್ ಶಾಲೆಗಳು, ವಿಶೇಷ ಚೇತನರ ಶಾಲೆಗಳು, ಕ್ಯಾನ್ಸರ್ ರಿಹೆಬಿಲಿಟೇಷನ್ ಸೆಂಟರ್, ಭಾಷಾ ತರಬೇತಿ ಕೇಂದ್ರಗಳು ಎಲ್ಲೆಲ್ಲಿ ಕೋರ್ಸ್ ಇದೆ?
– ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆಯಂಡ್ ಹಿಯರಿಂಗ್, ಮೈಸೂರು
– ಜ್ಞಾನಭಾರತಿ, ಬೆಂಗಳೂರು
– ಡಾ.ಎಸ್.ಆರ್. ಚಂದ್ರಶೇಖರ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್, ಹೆಣ್ಣೂರು ಮುಖ್ಯರಸ್ತೆ, ಬೆಂಗಳೂರು
– ಡಾ. ಎಂ.ವಿ. ಶೆಟ್ಟಿ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್, ಮಂಗಳೂರು
– ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಮಣಿಪಾಲ, ಮಂಗಳೂರು – ಅನಂತನಾಗ್ ಎನ್.