Advertisement

ಪ್ರವಾಸಿ ತಾಣಗಳಲ್ಲಿ ಶುದ್ಧ ನೀರು ಘಟಕ

05:38 AM Jul 06, 2020 | Lakshmi GovindaRaj |

ಕೆ.ಆರ್‌.ನಗರ: ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗುತ್ತದೆ ಎಂದು ಶಾಸಕ  ಸಾ.ರಾ.ಮಹೇಶ್‌ ಹೇಳಿದರು. ತಾಲೂಕಿನ ಸನ್ಯಾಸಿಪುರದಲ್ಲಿ ಸಾ.ರಾ.ಸ್ನೇಹ ಬಳಗ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಈವರೆಗೆ ಪಟ್ಟಣ ಸೇರಿದಂತೆ ತಾಲೂಕಾದ್ಯಂತ 124 ಶುದ್ಧ  ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಿದ್ದು, ಉಳಿದ  ಗ್ರಾಮಗಳಲ್ಲಿಯೂ ನಿರ್ಮಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಮನುಷ್ಯ ಆರೋಗ್ಯವಂತನಾಗಿ ಬದುಕಲು ಇತರ ಅಗತ್ಯ ವಸ್ತುಗಳ ಜತೆಗೆ ಕುಡಿಯುವ  ನೀರು ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಶುದ್ಧ ನೀರನ್ನೇ ಬಳಸಬೇಕಿದ್ದು, ಈ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು.

ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಯಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಡೆ ಗಮನಹರಿ ಸಬೇಕು.  ಗ್ರಾಮಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಸಾ.ರಾ.ಮಹೇಶ್‌ ಸಲಹೆ ನೀಡಿದರು. ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿದ್ದು, ಜನಸಾಮಾನ್ಯರು ಅನಗತ್ಯವಾಗಿ ಇತರೆ ಗ್ರಾಮ, ಜಿಲ್ಲೆಗಳಿಗೆ ಹೋಗಬಾರದು. ಮದುವೆ ಸಮಾರಂಭಗಳಲ್ಲಿ  ಭಾಗವಹಿಸುವುದನ್ನು ನಿಬಂಧಿಸಬೇಕು.

ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಚಂದ್ರಶೇಖರ್‌, ಯುವ ಜೆಡಿಎಸ್‌ ಮಾಜಿ ಅಧ್ಯಕ್ಷ ಎಚ್‌.ಕೆ.ಸುಜಯ್‌, ಟಿಎಪಿಸಿಎಂಎಸ್‌ ನಿರ್ದೇಶಕ ಎಸ್‌.ಟಿ.ಕೀರ್ತಿ, ವಕ್ತಾರ ಕೆ.ಎಲ್‌.ರಮೇಶ್‌, ಜಿಲ್ಲಾ ಜೆಡಿಎಸ್‌ ಅಲ್ಪಸಂಖ್ಯಾತ ಮುಖಂಡ ಮುಬಾರಕ್‌ ಉಲ್ಲಾಖಾನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next