ಮಂಗಳೂರು: ಈಶ್ವರಪ್ಪರಿಗೆ ಕ್ಲೀನ್ ಚಿಟ್ ಸತ್ಯಕ್ಕೆ ಸಂದ ಜಯ ಅಲ್ಲ, ಸುಳ್ಳಿಗೆ ಸಂದ ಜಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ಮೇಲೆ ಕಮಿಷನ್ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಸಾವಿಗೆ ನ್ಯಾಯ ಸಿಕ್ಕಿಲ್ಲ. ಈಶ್ವರಪ್ಪರನ್ನು ತನಿಖೆಯಿಂದ ಹೊರಗಿಡಲಾಗಿತ್ತು. ರಾಜಕೀಯ ಪ್ರಭಾವದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಇದರ ಬಗ್ಗೆ ಮೊದಲೇ ಸಚಿವರು ಪರೋಕ್ಷವಾಗಿ ಹೇಳಿದ್ದರು. ಈಗ ಅಧಿಕೃತ ಆಗಿದೆ ಅಷ್ಟೆ. ಹಾಗಾಗಿ ಇದು ಸತ್ಯಕ್ಕೆ ಸಂದ ಜಯ ಎನ್ನುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಕೆ.ಜೆ ಜಾರ್ಜ್ ಪ್ರಕರಣಕ್ಕೂ ಇದಕ್ಕೂ ಹೋಲಿಕೆ ಮಾಡಬಾರದು. ಜಾರ್ಜ್ ಅವರಿಗೆ ನರೇಂದ್ರ ಮೋದಿ ಸರಕಾರದ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಈಶ್ವರಪ್ಪ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಬೇಕು ಎಂದರು.
ಇದನ್ನೂ ಓದಿ: ನಾನೂ ಸಿಎಂ ಆಗ್ಬೇಕು.. .; ಕಾಂಗ್ರೆಸ್ ಗೆ ತುಟ್ಟಿಯಾಗುತ್ತಿದೆಯೇ ಸಿಎಂ ಆಕಾಂಕ್ಷಿಗಳ ಪಟ್ಟಿ
ಬಿಜೆಪಿ ಕೊಲೆಗಡುಕರ ಪಕ್ಷ. ಕಾಂಗ್ರೆಸ್ ಯಾವತ್ತೂ ಹಿಂಸೆಯನ್ನು ಪ್ರಚೋದಿಸಿಲ್ಲ. ಕಾಂಗ್ರೆಸ್ ನವರ ಮೇಲೆ ಎಫ್ ಐ ಆರ್ ದಾಖಲಾಗಿಲ್ಲ ಎಂದರು.