Advertisement
ಡ್ರೀಮ್ 11 ಫ್ಯಾಂಟಸಿ ಗೇಮಿಂಗ್ ಆ್ಯಪ್ ನಲ್ಲಿ ಕೋಟಿ ಗೆಲ್ಲುವುದು ಅಂದರೆ ಅದು ಕೋಟ್ಯಂತರ ಮಂದಿಯಲ್ಲಿ ಒಬ್ಬರಿಗೆ ಸಿಗುವ ಅದೃಷ್ಟವೆಂದೇ ಹೇಳಬಹುದು. ಇಂಥದ್ದೇ ಅದೃಷ್ಟ ಬಿಹಾರದ ಬಡ ವ್ಯಕ್ತಿಯೊಬ್ಬನಿಗೆ ಖುಲಾಯಿಸಿದೆ.
Related Articles
Advertisement
ಈ ಬಗ್ಗೆ ಮಾತನಾಡುವ ಅವರು, “ನನಗೆ ತುಂಬಾ ಸಂತೋಷವಾಗಿದೆ. ಮೊದಲು ಕೋಟಿ ಗೆದ್ದಿದ್ದೇನೆ ಅಂಥ ನಂಬಿಕೆ ಬರಲಿಲ್ಲ. ಇಂತಹ ಅಪ್ಲಿಕೇಶನ್‌ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಇದು ಮೋಸ ಎಂದು ಭಾವಿಸಿದ್ದೆ. ನಾನು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಆರು ತಿಂಗಳಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ ನನಗೆ ಕೆಲಸವಿಲ್ಲ. ನಾನು ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಹಣ ಗೆದ್ದಿದ್ದೇನೆ” ಎಂದು ಹೇಳುತ್ತಾರೆ.
ಏನಿದು ಡ್ರೀಮ್ 11: ಡ್ರೀಮ್ 11 ಒಂದು ಜನಪ್ರಿಯ ಫ್ಯಾಂಟಸಿ ಗೇಮಿಂಗ್ ಆ್ಯಪ್ ಆಗಿದೆ. ಡ್ರೀಮ್ 11 ನಲ್ಲಿ ಪ್ರತಿನಿತ್ಯ 3 ಮಂದಿ ಕೋಟಿ ಗೆಲ್ಲುವ ಅವಕಾಶಗಳಿರುತ್ತದೆ. 49 ಅಥವಾ 59 ರೂಪಾಯಿಯನ್ನು 11 ಜನರ ತಂಡವನ್ನು ಮಾಡಬೇಕಾಗುತ್ತದೆ. ನಾವು ಆಯ್ಕೆ ಮಾಡಿದ ನಾಯಕ/ ಉಪನಾಯಕ ಸೇರಿದಂತೆ 11 ಮಂದಿ ಆಟಗಾರರು ಉತ್ತಮವಾಗಿ ಆಡಿದರೆ ರ್‍ಯಾಂಕ್ ಆಧಾರದಲ್ಲಿ ಕೋಟಿ ಗೆಲ್ಲಬಹುದಾಗಿದೆ. ಪ್ರಥಮ ರ್‍ಯಾಂಕ್ ನಲ್ಲಿ ಬಂದರೆ ಒಂದೂವರೆ ಕೋಟಿ ಆ ಬಳಿಕ ಲಕ್ಷ ನಂತರ ಸಾವಿರ ಹೀಗೆ ಈ ಫ್ಯಾಂಟಸಿ ಗೇಮಿಂಗ್ ಆ್ಯಪ್ ನಲ್ಲಿ ಬಹುಮಾನ ಇರುತ್ತದೆ.
ಎಚ್ಚರ ಇದು ಹೆಚ್ಚಾದರೆ ಗೀಳು.. ಡ್ರೀಮ್ 11 ಸೇರಿದಂತೆ ಹತ್ತಾರು ಫ್ಯಾಂಟಸಿ ಆ್ಯಪ್ ಗಳಿವೆ. ಕೇವಲ 49 ಅಥವಾ 59 ರೂ. ಹಾಕಿದರೆ ಇಲ್ಲಿ ಸುಲಭವಾಗಿ ಕೋಟಿ ಗೆಲ್ಲುತ್ತಾರೆ ಎನ್ನುವುದು ನಮ್ಮ ಭ್ರಮೆ ಅಷ್ಟೇ. ಇಲ್ಲಿ ಕೋಟಿ ಗೆಲ್ಲುವ ಆಸೆಯಿಂದ ಪ್ರತಿನಿತ್ಯ ಕೋಟ್ಯಂತರ ಮಂದಿಯ ಪೈಪೋಟಿ ಇರುತ್ತದೆ. ಇವರಲ್ಲಿ ಕೋಟಿ ಸಿಗುವುದು ಅದೃಷ್ಟವಂತರಿಗೆ ಮಾತ್ರ. ಈ ಅದೃಷ್ಟವಂತರು ಕೋಟಿಯಲ್ಲಿ ಒಬ್ಬರು ಇಬ್ಬರು ಮಾತ್ರ. ಇಲ್ಲಿ ಕೋಟಿ ಗೆಲ್ಲುತ್ತೇವೆ ಎಂದು ತಂಡವನ್ನು ಕಟ್ಟಿ ಹಣ ಹಾಕುತ್ತಲೇ ಹೋದರೆ ನಷ್ಟ ಆಗಿ ಜೇಬು ಖಾಲಿ ಆಗುವುದು ಗ್ಯಾರಂಟಿ. ಆದ್ದರಿಂದ ಈ ಫ್ಯಾಂಟಸಿ ಆ್ಯಪ್ ಗಳ ಬಗ್ಗೆ ಎಚ್ಚರವಿರಲಿ.